ಪಟಾಕಿ ಅವಾಂತರ..!ಕಣ್ಣು ಸುಟ್ಟುಕೊಂಡ ಮಕ್ಕಳು

ಕತ್ತಲೆಯಿಂದ ಬೆಳಕಿನೆಡಿಗೆ ದೀಪಾವಳಿ ಎಂದು ಹೇಳುತ್ತಾರೆ ಅದರೆ  ದೀಪಾವಳಿ ಹಬ್ಬದ ಮೊದಲನೇ ದಿನವೇ  ಬೆಂಗಳೂರಿನ ನಗರದಲ್ಲಿ ಇಬ್ಬರು ಮಕ್ಕಳ ಪಾಲಿಗೆ ಶಾಶ್ವತ ಅಂಧಕಾರವನ್ನು ತಂದೊಡ್ಡಿದೆ.

ದೀಪಾವಳಿ ಹಬ್ಬದ ಖಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ನೆನ್ನೆ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ‌ ಡಿ ಜೆ ಹಳ್ಳಿಯ 13 ವರ್ಷದ ಸಹೀದಾ ಬಾನು ಎಂಬ ಎಳೆನೇ ತರಗತಿ ವಿದ್ಯಾರ್ಥಿನಿಗೆ ಪಟಾಕಿ ತಗಲಿ ಒಂದು ಕಣ್ಣಿಗೆ ತೀವ್ರಪೆಟ್ಟಾಗಿ ದೃಷ್ಟಿ ಕಳೆದುಕೊಂಡಿದೆ.

ಇನ್ನು ಬೊಮ್ಮನಹಳ್ಳಿಯಲ್ಲಿ ಮನೆಯ ಮುಂದೆ ಪಟಾಕಿ ಸಿಡಿಸೋದನ್ನ ನೋಡುತ್ತ ನಿಂತಿದ್ದ ಆರು ವರ್ಷದ ಬಾಲಕಿ ದಿವ್ಯಾಗೆ ರಸ್ತೆಯಲ್ಲಿಟ್ಟಿದ್ದ ಪಟಾಕಿ ಸಿಡಿದು ಎಡಕಣ್ಣಿನ ರೆಟಿನಾಗೆ ತೀವ್ರ ಪೆಟ್ಟಾಗಿದೆ.

ಇಬ್ಬರು‌ ಬಾಲಕಿಯರನ್ನು ಮಿಂಟೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯರು ಗಾಯಗೊಂಡ ಮಕ್ಕಳಿಗೆ ರಾತ್ರಿಯೇ ಆಪರೇಷನ್ ನಡೆಸಿ ಹೆಚ್ಚಿನ ಚಿಕಿತ್ಸೆ ನೀಡ್ತಿದ್ದಾರೆ. ಇನ್ನು ‌ನೆನ್ನೆ ಒಂದೇ ದಿನ ಪಟಾಕಿ ಸಿಡಿದು ಗಾಯಗೊಂಡವರ ಪೈಕಿ ಮಿಂಟೊ‌ ಕಣ್ಣಿನ ಆಸ್ಪತ್ರೆಯಲ್ಲಿ 7 ಹಾಗೂ ನಾರಾಯಣ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.

Recommended For You

Leave a Reply

Your email address will not be published. Required fields are marked *