ಟಗರು ಡಾಲಿ ಪಾತ್ರ ನೋಡಿ ಇವರು ಮಾಡಿದ್ದೇನು ಗೊತ್ತಾ..?

X
TV5 Kannada7 Nov 2018 6:47 AM GMT
ದಾವಣಗೆರೆ: ಟಗರು ಸಿನಿಮಾದ ಡಾಲಿ ಪಾತ್ರವನ್ನು ನೋಡಿ, ಅದರಿಂದ ಪ್ರೇರೇಪಿತರಾದ ಯುವಕರು ಕೊಲೆ ಮಾಡಿ, ಜೈಲು ಪಾಲಾಗಿದ್ದಾರೆ.
ರೌಡಿಸಂನಲ್ಲಿ ಹೆಸರು ಮಾಡಲು ಯುವಕರು ಕಾಂತರಾಜ್ ಎಂಬ ಯುವಕನ ಕೊಲೆ ಮಾಡಿದ್ದು, ಅಪ್ರಾಪ್ತರು ಬಂಧಿಸಲ್ಪಟ್ಟಿದ್ದಾರೆ.
ಅಕ್ಟೋಬರ್ 27ರಂದು ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಈ ಕೊಲೆ ನಡೆದಿದ್ದು, ಬಂಧಿತರನ್ನು ಪ್ರಸನ್ನ ಅಲಿಯಾಸ್ ಡಾಲಿ, ಪಚ್ಚಿ ಅಲಿಯಾಸ್ ಪ್ರಶಾಂತ್ ಎಂದು ಗುರುತಿಸಲಾಗಿದೆ.
ಬಂಧಿತರು ಸಿನಿಮಾದಲ್ಲಿ ಡಾಲಿ ಆ್ಯಕ್ಟಿಂಗ್ ನೋಡಿ ತಾನೂ ರೌಡಿ ಆಗಬೇಕು ಎಂದು, ಥೇಟ್ ಡಾಲಿಯಂತೆ ಬಿಯರ್ ಕುಡಿದು ಸಿನಿಮಾದ ರೀತಿ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಈ ಬಗ್ಗೆ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story