Top

ಉಪಚುನಾವಣೆ ಫಲಿತಾಂಶ ಹೊರಬಿತ್ತು.ರಾಜಕೀಯ ಪಕ್ಷಗಳ ಮುಂದಿನ ನಡೆಯೇನು?

ಉಪಚುನಾವಣೆ ಫಲಿತಾಂಶ ಹೊರಬಿತ್ತು.ರಾಜಕೀಯ ಪಕ್ಷಗಳ ಮುಂದಿನ ನಡೆಯೇನು?
X

ರಾಷ್ಟ್ರ ರಾಜಕಾರಣದಲ್ಲೇ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಗೆಲುವು ಸಾಧಿಸುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಉಪಚುನಾವಣೆ ಫಲಿತಾಂಶದಿಂದ ಭಾರಿ ಮುಖಭಂಗವಾಗಿದೆ.

5 ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ದೋಸ್ತಿ ಪಕ್ಷಗಳು ಹೊಸ ಹುರುಪಿನೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಸಿದ್ದವಾಗಿವೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೇಲೆ ಕೈ ಎತ್ತಿ ವಿಕ್ಟರಿ ಸಿಂಬಲ್ ತೋರಿಸ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮೈತ್ರಿಸರ್ಕಾರದವರು ಭರ್ಜರಿ ಏಟನ್ನೇ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾದ್ಯಕ್ಷರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಪ್ರಯಾಸದ ಗೆಲುವಾಗಿದೆ. ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಲೋಕಸಭೆ ಉಪಚುನಾವಣೆ ಶಾಕ್ ನೀಡಿದೆ.

ಇಷ್ಟೆಲ್ಲಾ ಆದ ಮೇಲೂ ಬಿಜೆಪಿ ನಾಯಕರು ಹೈಕಮಾಂಡ್ ಗೆ ಏನಪ್ಪಾ ಉತ್ತರ ಹೇಳೋದು ಎಂದು ಚಿಂತಾಕ್ರಾಂತರಾಗಿದ್ದಾರೆ. ಸೋಲಿನ ಆತ್ಮಾವಲೋಲನದಲ್ಲಿರುವ ಬಿಜೆಪಿ ಮತ್ತೆ ಲೋಕಸಭೆ ಚುನಾವಣೆಗೆ ಗೆಲುವ ಛಲದಲ್ಲಿದೆ.

ಜೆಡಿಎಸ್ ಭದ್ರಕೋಟೆ ಮಂಡ್ಯ ಹಾಗೂ ರಾಮನಗರದಲ್ಲಿ ಬಿಜೆಪಿ ಮತ ಬ್ಯಾಂಕ್ ಮೊದಲಿದ್ದಷ್ಟೇ ಇದ್ದದ್ದು ಬಿಜೆಪಿ ನಾಯಕರಿಗೆ ಕೊಂಚ ನೆಮ್ಮದಿ ನೀಡಿದೆ.

ಬಿಜೆಪಿ ನಾಯಕರು ಯಾರೂ ಊಹಿಸದ ರೀತಿಯಲ್ಲಿ ಉಪಚುನಾವಣೆಯಲ್ಲಿ ಗೆಲುವು ತೋರಿಸಿರುವ ಮೈತ್ರಿ ಪಕ್ಷಗಳು ವಿಜಯದ ಸಂಭ್ರಮದಲ್ಲಿ ತೊಡಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಮತ್ತೆ ಮೈತ್ರಿ ಮಾಡಿಕೊಂಡು ಬಿಜೆಪಿ ಹಣಿಯಬಹುದೆಂಬ ಆತ್ಮವಿಶ್ವಾಸ ಹೆಚ್ಚಾದಂತಾಗಿದೆ. ಕರ್ನಾಟಕದಲ್ಲಿ ಅಷ್ಟು ಸುಲಭವಾಗಿ ನಿಮ್ಮನ್ನು ಬಿಡಲ್ಲ ಎಂದು ಬಿಜೆಪಿ ನಾಯಕರಿಗೆ ಮೈತ್ರಿ ಪಕ್ಷಗಳು ಸಂದೇಶ ರವಾನಿಸಿವೆ. ಒಳಜಗಳ ಹಾಗೂ ಒಗ್ಗಟ್ಟಿನ ಕೊರತೆಯ ನಡುವೆಯೂ ಈ ಬಾರಿ ಬಿಜೆಪಿಗೆ ಸೋಲುಣಿಸಲೇಬೇಕೆಂಬ ಹಠದಿಂದ ಮೈತ್ರಿಸರ್ಕಾರಗಳು ಗೆಲವು ಸಾಧಿಸಿವೆ.

ಸದ್ಯ ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬುದು ಬಿಜೆಪಿ ನಾಯಕರಿಗೆ ಮನವರಿಕೆ ಆಗಿದೆ. ಉಳಿದಂತೆ ದೋಸ್ತಿ ಪಕ್ಷಗಳಿಗೆ ಫಲಿತಾಂಶ ದೀಪಾವಳಿ ಸ್ವೀಟ್ ನೀಡಿದಂತಾಗಿದೆ.

Next Story

RELATED STORIES