ಶಿವಮೊಗ್ಗದಲ್ಲಿ ಗೆಲುವಿನ ನಗೆ ಬೀರಿದ ರಾಘವೇಂದ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲುವಿನ ನಗೆ ಬೀರಿದ್ದಾರೆ.
ಫಲಿತಾಂಶದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರಾಘವೇಂದ್ರ, ಶಿವಮೊಗ್ಗ ಮತದಾರ ಬಂಧಗಳಿಗೆ ಧನ್ಯವಾದ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಶಂಕರಮೂರ್ತಿ, ಈಶ್ವರಪ್ಪ ಮುಂತಾದ ಬಿಜೆಪಿ ನಾಯಕರು ಕೊಟ್ಟ ಕಾರ್ಯಕ್ರಮಗಳಿಂದ ಇದು ಬಿಜೆಪಿ ಗೆಲುವು ಸಾಧಿಸಿದೆ. ಅವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಪೈಪೋಟಿ ಬಗ್ಗೆ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರ ಅಡ್ಡದಾರಿ ಹಿಡಿದು ನಮ್ಮನ್ನ ಸೋಲಿಸುವ ಪ್ರಯತ್ನ ಮಾಡಿತ್ತು. ಬಿಜೆಪಿ ಭದ್ರಕೋಟೆಯಲ್ಲಿ ನಮ್ಮನ್ನ ಸೋಲಿಸಿ, ಅವಮಾನ ಮಾಡುವ ಪ್ರಯತ್ನ ಮಾಡಿತ್ತು. ಅಲ್ಲದೇ ಬಿಜೆಪಿ ಭದ್ರಕೋಟೆಯ ಬಾಗಿಲು ಹಾಕೋಕ್ಕೆ ಕೇವಲ 24 ಗಂಟೆ ಸಾಕು ಎಂಬ ಮಾತನ್ನಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಶಿವಮೊಗ್ಗ ಜನ ನಮ್ಮ ಕೈ ಬಿಡಲಿಲ್ಲ.
ಇನ್ನು ಕೆಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದರೂ ಕೂಡ, ಕಾಂಗ್ರೆಸ್- ಜೆಡಿಎಸ್ ಮತ ಸೇರಿಸಿದರೆ ನಮಗಿಂತ 1ಲಕ್ಷ ಹೆಚ್ಚು ಮತ ಬಂದಿತ್ತು. ಆದ್ರೆ ಇದೀಗ ನಮಗೆ ಹೆಚ್ಚಿನ ಮತ ಸಿಕ್ಕಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.