ಅಧಿಕಾರಕ್ಕಾಗಿ ಏನು ಮಾಡೋಕ್ಕಾದ್ರೂ ಬಿಜೆಪಿಯವರು ರೆಡಿ- ಸಿದ್ದರಾಮಯ್ಯ

ಬೆಂಗಳೂರು: ಉಪಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಬಿಜೆಪಿ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಐದು ಉಪಚುನಾವಣೆ ಫಲಿತಾಂಶ ಹಿನ್ನಲೆ, ಐದು ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ಮೋದಿ ವಿರೋಧಿ, ಬಿಜೆಪಿ ವಿರೋಧಿ ಗಾಳಿ ದೇಶದಲ್ಲಿ ಬೀಸುತ್ತಿದೆ. ಉಗ್ರಪ್ಪ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ತಾರೆ ಅಂತಾ ಪ್ರಚಾರದ ವೇಳೆ ಹೇಳ್ತಾನೆ ಬಂದಿದ್ದೆ. ನಾಲ್ಕು ದಿನ ಅಲ್ಲಿ, ನಾಲ್ಕು ದಿನ ಜಮಖಂಡಿಯಲ್ಲಿ ಪ್ರಚಾರ ಮಾಡಿದ್ದೆ. ಬಿಜೆಪಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಅಲ್ಲದೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡ್ತೇವೆ ಅಂದಿದ್ದ ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಅಲೆ ಕೆಲಸ ಮಾಡಿದೆ. ಬಿಜೆಪಿಯವರ ಮಾತಿಗೆ ನಾನು ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಕಾಂಗ್ರೆಸ್ ಎಂಎಲ್ಸಿ ಮಗನನನ್ನ ಕರೆದುಕೊಂಡು ಹೋದ್ರಲ್ಲ. ಇವರು ಪವಿತ್ರಾನಾ ?.. ಅಧಿಕಾರಕ್ಕಾಗಿ ಏನು ಮಾಡೋಕ್ಕಾದ್ರೂ ಬಿಜೆಪಿಯವರು ರೆಡಿ ಇದ್ದಾರೆ ಎಂದು ಕಿಡಿಕಾರಿದರು.
ಬಳ್ಳಾರಿ ಗೆಲುವು ಡಿಕೆಶಿ, ಜಮಖಂಡಿ ಗೆಲವು ಸಿದ್ದರಾಮಯ್ಯಗೆ ಅನ್ನೋದಲ್ಲ. ಇದು ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಗೆಲುವು. ಬಳ್ಳಾರಿಯಲ್ಲಿ ಕತ್ತಲು ಕಳೆದು ಅಲ್ಲಿನ ಜನಕ್ಕೆ ಬೆಳಕು ಬಂದಂತಾಗಿದೆ. ಉಪಚುನಾವಣೆ ಫಲಿತಾಂಶ 2018 ರ ಲೋಕಸಭೆ ಚುನಾವಣೆಯ ಮುನ್ಸೂಚನೆ. ಫಲಿತಾಂಶ ಪಕ್ಷಕ್ಕೆ ಮತ್ತು ಸಮ್ಮಿಶ್ರಸರ್ಕಾರದ ಆಡಳಿತಕ್ಕೆ ಸಿಕ್ಕ ಗೆಲುವು ಎಂದು ಹೇಳಿದ್ದಾರೆ.