Top

ಹಬ್ಬದ ದಿನದಂದು ಎಟಿಎಂ ತುಂಬಲು ತಂದಿದ್ದ 75 ಲಕ್ಷ ಮಂಗಮಾಯ

ಹಬ್ಬದ ದಿನದಂದು ಎಟಿಎಂ ತುಂಬಲು ತಂದಿದ್ದ 75 ಲಕ್ಷ ಮಂಗಮಾಯ
X

ಹಬ್ಬದ ದಿನದಂದು ಎಟಿಎಂ ತುಂಬಲು ತಂದಿದ್ದ 75 ಲಕ್ಷ ಕ್ಯಾಶನ್ನು ಕದ್ದ ಡ್ರೈವರ್ ಹಣದೊಂದಿಗೆ ಪರಾರಿಯಾಗಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಹೊಂದಿಕೊಂಡ ಕೂಗಳತೆ ದೂರದಲ್ಲಿ ನಡೆದಿದೆ .

ಕಳೆದ ರಾತ್ರಿ 8-30 ರ ಸುಮಾರಿಗೆ ಈ ಕೃತ್ಯ ನಡೆದಿದ್ದು,ಶಲ್ತಾಫ್ ಹಣದೊಂದಿಗೆ ಪರಾರಿಯಾದ ಡ್ರೈವರ್ ಎನ್ನಲಾಗಿದೆ.ಶಲ್ತಾಫ್ ವ್ರೈಟರ್ಸ್ ಸೇಫ್ ಗಾರ್ಡ್ ಎಜೆನ್ಸಿಯ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.ಕಳೆದ ರಾತ್ರಿ 8-30ರ ಸುಮಾರಿಗೆ ಆಕ್ಸಿಸ್ ಬ್ಯಾಂಕ್ ಗೆ ಹಣ ತುಂಬಲು ಕಾರ್ ಬಂದಿತ್ತು.ಈ ವೇಳೆ ಎಟಿಎಂಗೆ ಹಣ ತುಂಬಲೆಂದು ಸುಲ್ತಾನ್ ಮತ್ತು ಅಬ್ದುಲ್ ತೆರಳಿದ್ದರು.ಇದೇ ಸಮಯ ನೋಡಿ ಕಾರ್ನಲ್ಲಿದ್ದ 75 ಹಣ ಕದ್ದ ಶಲ್ತಾಪ್ ಪರಾರಿಯಾಗಿದ್ದಾನೆ.

ವೈಟರ್ಸ್ ಸೇಪ್ ಗಾರ್ಡ್ ಎಟಿಎಂಗಳಿಗೆ ಹಣ ತುಂಬಲು ಕಾಂಟ್ರಾಕ್ಟ್ ಪಡೆದಿದ್ದ ಏಜೆನ್ಸಿ. ತನ್ನದೇ ಕಾರ್ ಚಾಲಕನ ಕೃತ್ಯಕ್ಕೆ ಬೆಸ್ತುಬಿದ್ದಿದೆ. ಘಟನೆ ಸಂಬಂಧ ಸ್ಥಳಕ್ಕೆ ಕೆಜಿ ಹಳ್ಳಿ ಪೋಲೀಸರು, ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಣದ ಜೊತೆ ಪರಾರಿಯಾಗಿರುವ ಕಳ್ಳನ ಡೀಟೇಲ್ಸ್ ಮತ್ತು ಪ್ರಮುಖ ಸರ್ಕಲ್ಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ.ಕೂಡಲೆ ಆರೋಪಿ ಶಲ್ತಾಪ್ ನನ್ನು ಬಂಧಿಸುವುದಾಗಿ ಕೆ.ಜಿ.ಹಳ್ಳಿ ಪೊಲೀಸರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Next Story

RELATED STORIES