Top

ನಾಡಿನಾದ್ಯಂತ ಬೆಳಕಿನ ಹಬ್ಬದ ಸಂಭ್ರಮ,ಮಾರುಕಟ್ಟೆಯಲ್ಲಿದೆ ಬಣ್ಣಬಣ್ಣದ ದೀಪಗಳು..!

ನಾಡಿನಾದ್ಯಂತ ಬೆಳಕಿನ ಹಬ್ಬದ ಸಂಭ್ರಮ,ಮಾರುಕಟ್ಟೆಯಲ್ಲಿದೆ ಬಣ್ಣಬಣ್ಣದ ದೀಪಗಳು..!
X

ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿದೆ. ಅಂಧಕಾರವನ್ನ ಅಳಿಸಿ ಬೆಳಕನ್ನು ಚೆಲ್ಲುವ ದೀಪಾವಳಿಗೆ ಸಿಲಿಕಾನ್ ಸಿಟಿ ಕೂಡ ಸಜ್ಜಾಗಿದೆ. ಇನ್ನೂ ಹಬ್ಬದ ಹಿನ್ನಲೆ ಉದ್ಯಾನ ನಗರಿ ಮಾರ್ಕೆಟ್​ಗಳಲ್ಲಿ ಹಬ್ಬದ ವಾತಾವರಣ ಜೋರಾಗಿದ್ದು, ಹಬ್ಬದ ತಹರೇವಾರಿ ದೀಪಗಳು ತಯಾರಾಗಿದೆ.

ನಾಡಿನಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಮಾರುಕಟ್ಟೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇನ್ನೂ ಹಬ್ಬದ ಹಿನ್ನಲೆ ನಗರದ ಬಹುತೇಕ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ.

ಇನ್ನೂ ದೀಪಾವಳಿ ಅಂದಾಕ್ಷಣ ನೆನಪಾಗುವಂಥದ್ದು ದೀಪಗಳು.ಮಣ್ಣಿನ ದೀಪದಿಂದ ಹಿಡಿದು ವೆರೈಟಿ ವೆರೈಟ ದೀಪಗಳು ಮಾರ್ಕೆಟ್​ಗೆ ಲಗ್ಗೆ ಇಟ್ಟಿದ್ದು ಗ್ರಾಹಕರನ್ನು ಕೈ ಬೀಸಿ ಕರಿತಿವೆ. ಇನ್ನೂ ಮಣ್ಣಿನ ದೀಪಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಮಣ್ಣಿನ ದೀಪಗಳ ಮೇಲೆ ವಿಶೇಷ ಚಿತ್ತಾರ ಅಲಂಕಾರ ನೋಡಬಹುದಾಗಿದೆ.

ಮಲ್ಲೇಶ್ವರಂನಲ್ಲಿರುವ ವರ್ಣ ಸ್ಟೋರಂನಲ್ಲಿ 5 ರೂ ನಿಂದ ಹಿಡಿದು 5 ಸಾವಿರದವರೆಗಿನ ಡಿಫರೆಂಟ್​ ಡಿಫರೆಂಟ್​ ದೀಪಗಳನ್ನು ಕಾಣಬಹುದಾಗಿದ್ದು , ನವಿಲಿನಾಕಾರದ, ದೇವರ ಚಿತ್ರಗಳಿರುವ, ಲಾಂಪ್​ ರೀತಿಯ ದೀಪಗಳನ್ನು ಕಾಣಬಹುದಾಗಿದೆ.

ದೀಪಾವಳಿ ಹಬ್ಬ ಅಂದ್ರೆ ದೀಪಗಳನ್ನು ಬೆಳಗಿಸೋದು, ಹೊಸತನವನ್ನು ಸಂಭ್ರಮದಿಂದ ಆಚರಿಸೋದು. ಹಬ್ಬವನ್ನು ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಸುಂದರವಾಗಿರೋ ದೀಪಗಳಿಂದ ದೀಪಾವಳಿ ಮತ್ತಷ್ಟು ಹೆಚ್ಚಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.

Next Story

RELATED STORIES