TV5 ಜೊತೆ ಡಿ.ಕೆ.ಸುರೇಶ್ EXCLUSIVE ಮಾತು

ಬೆಂಗಳೂರು: ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮೈತ್ರಿ ಪಕ್ಷ, ಬೆಳಕಿನ ಹಬ್ಬ ಆಚರಿಸುವ ಖುಷಿಯಲ್ಲಿದೆ. ಇನ್ನು ತಮ್ಮ ಗೆಲುವಿನ ಬಗ್ಗೆ ಡಿ.ಕೆ.ಸುರೇಶ್ ಸಂತಸ ಹಂಚಿಕೊಂಡಿದ್ದಾರೆ.
ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಸುರೇಶ್, ಇದು ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಗೆಲುವು ಎಂದು ಹೇಳಿದ್ದಾರೆ. ಬಳ್ಳಾರಿ, ಜಮಖಂಡಿ, ರಾಮನಗರ, ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿ ಜಯಗಳಿಸಿದ್ದು, ಇದು ಕುಮಾರಸ್ವಾಮಿ ಆಡಳಿತದ ಮೈತ್ರಿ ಸರ್ಕಾರಕ್ಕೆ ಸಂದ ಜಯವೆಂದು ಭಾವಿಸಿದ್ದೇನೆ ಎಂದು ಹೇಳಿದರು.
ಇನ್ನು ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್ ಗೆದ್ದಿದ್ದಾರೆ ಎನ್ನುವುದಕ್ಕಿಂತ, ಬಳ್ಳಾರಿ ಜನ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರಕ್ಕೆ ಬೆಂಬಲಿಸಿದ್ದಾರೆ. ಅಲ್ಲಿ ಅಭಿವೃದ್ಧಿಯ ಅವಶ್ಯಕತೆ ಇದೆ. ಡಿಕೆಶಿ ಅಭಿವೃದ್ಧಿಯ ಚಿತ್ರಣವನ್ನ ಇಟ್ಟಿದ್ದು, ಅದಕ್ಕೆ ಬಳ್ಳಾರಿ ಜನ ಗೌರವ ನೀಡಿದ್ದಾರೆ. ನಮ್ಮ ಅಭ್ಯರ್ಥಿ ಉಗ್ರಪ್ಪನವರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಅಲ್ಲದೇ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಡಿ.ಕೆ.ಸುರೇಶ್ ಅಭಿನಂದನೆ ಸಲ್ಲಿಸಿದರು.