Top

ಬಿಜೆಪಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು: ಸಿಎಂ ಕುಮಾರಸ್ವಾಮಿ

ಬಿಜೆಪಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು: ಸಿಎಂ ಕುಮಾರಸ್ವಾಮಿ
X

ಬಿಜೆಪಿಯವರು ಈಗಲೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡ್ತಿದ್ದಾರೆ. ಶಿರಾ ಶಾಸಕ ಸತ್ಯನಾರಾಯಣ, ಪಿರಿಯಾಪಟ್ಟಣ ಶಾಸಕ ಮಹಾದೇವ ಅವರನ್ನು ಸಂಪರ್ಕಿಸಿ ಕೋಟಿ ಕೋಟಿ ಹಣದ ಆಮೀಷ ಒಡ್ಡುವ ಮೂಲಕ ಅವರ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯವರ ಆಪರೇಷನ್ ಕಮಲ ವಿಚಾರದ ಬಗ್ಗೆ ಮಾತನಾಡಿದರು ಬಿಜೆಪಿಯವರು ನಮ್ಮ ಪಕ್ಷದ ಶಾಸಕರಿಗೆ ಕೋಟಿ ಕೋಟಿ ಹಣದ ನೀಡುವುದಾಗಿ ಆಮಿಷ ನೀಡುತ್ತಿದ್ದಾರೆ. ಇದರ ಪರಿಣಾಮ ಹೀಗೆ ಇರುವುದಿಲ್ಲ. ಬಿಜೆಪಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಬಿಜೆಪಿಯವರಿಗೆ ಕೋಟಿಯೇ ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ಬಿಜೆಪಿ ನಾಯಕರ ವಿರುದ್ದ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದರು.

ಇನ್ನೂ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು ಮೂರು ಲೋಕಸಭೆ ಕ್ಷೇತ್ರಗಳಲ್ಲಿ ತಲಾ ಒಂದು ಗೆಲುವು ಸಾಧಿಸಲಾಗಿದೆ. ಮಂಡ್ಯ ಹಾಗೂ ಬಳ್ಳಾರಿಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ನಾವು ಸಿದ್ಧರಾಗಿರಲಿಲ್ಲ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಹಾಕಲು ಸೂಚಿಸಿದರು. ನಮ್ಮ ಅಭ್ಯರ್ಥಿ ವಿದೇಶದಲ್ಲಿದ್ದರು. ತರಾತುರಿಯಲ್ಲಿ ಕರೆಸಿ ನಾಮಪತ್ರ ಹಾಕಿಸಲಾಗಿತ್ತು. ಸಿದ್ಧತೆ ಮಾಡಿಕೊಂಡಿದ್ದರೆ ಖಂಡಿತ ಶಿವಮೊಗ್ಗ ಗೆಲ್ಲುತ್ತಿದ್ದೆವು ಆದರೆ ಹೀಗ ಶಿವಮೊಗ್ಗದಲ್ಲಿ ನಾವು ನೈತಿಕವಾಗಿ‌ ಗೆಲುವು ಸಾಧಿಸಿದ್ದೇವೆ ಎಂದರು.

ಐದು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ‌ ಎಲ್ಲ ಕಾಂಗ್ರೆಸ್ ನಾಯಕರು ಸಾಕಷ್ಟು ಶ್ರಮ ಹಾಕಿದ್ದಾರೆ ಹೀಗಾಗಿಯೇ ನಾವು ಗೆಲುವು ಸಾಧಿಸಲೂ ಕಾರಣವಾಗಿದ್ದು ಎಂದು ಧನ್ಯವಾದವನ್ನು ಕಾಂಗ್ರೆಸ್ ನಾಯಕರಿಗೆ ಅರ್ಪಿಸಿದರು.

ಸರ್ಕಾರ ಬಂದು ಕೇವಲ‌ ಆರು ತಿಂಗಳಾಗಿದೆ. ನಮ್ಮ ಯೋಜನೆ ಇನ್ನೂ ಜನರಿಗೆ ತಲುಪುವ ಹಂತದಲ್ಲಿದೆ. ಜನರು ಸರ್ಕಾರದ ಜನಪರ ಕಾರ್ಯಕ್ರಮ ಒಪ್ಪಿದ್ದಾರೆ. ಇನ್ನೂ ಅನೇಕ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಆಗಲೇ ತೀರ್ಮಾನಿಸಿದ್ದೇವೆ. ಎರಡೂ ಪಕ್ಷದ ನಾಯಕರು ಚರ್ಚಿಸಿ ಸೀಟು ಹಂಚಿಕೆ ಮಾಡುತ್ತಾರೆ ಎಂದರು.

ಇನ್ನೂ 28 ಸ್ಥಾನ ಗೆಲ್ಲುವುದು ನಮ್ಮ‌ ಗುರಿ ಎರಡು ಸ್ಥಾನ ಗೆದ್ದಿದ್ದೇವೆ ಎಂದು ಮರೆಯುವುದಿಲ್ಲ ನಮ್ಮ ಜವಬ್ದಾರಿಯನ್ನು ಜನ ಹೆಚ್ಚಿಸಿದ್ದಾರೆ. ಜವಬ್ದಾರಿಯಿಂದ ನಾವು ಮತ್ತಷ್ಟು ಪ್ರಬಲಗೊಳಿಸುತ್ತೇವೆ. ಸರ್ಕಾರದಿಂದ ಇನ್ನಷ್ಟು ಜನಪರ‌ ಯೋಜನೆ ತರುತ್ತೇವೆ ಎಂದು ಹೇಳಿದರು.

Next Story

RELATED STORIES