ಇನ್ಮೇಲೆ ನನ್ನ ಗುರಿ ಏನಿದ್ದರೂ ರಾಮನಗರದ ಅಭಿವೃದ್ಧಿ- ಅನಿತಾ ಕುಮಾರಸ್ವಾಮಿ

X
TV5 Kannada6 Nov 2018 7:57 AM GMT
ರಾಮನಗರ: ರಾಮನಗರ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಅನಿತಾ ಕುಮಾರಸ್ವಾಮಿ, ತಮ್ಮ ಸಂಭ್ರಮವನ್ನ ಹಂಚಿಕೊಂಡಿದ್ದು, ತಮ್ಮ ಗೆಲುವಿಗೆ ಕಾರಣರಾದ ರಾಮನಗರ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಗೆಲುವಿನ ಯಶಸ್ಸು ಕ್ಷೇತ್ರದ ಜನರಿಗೆ ಸಲ್ಲಬೇಕೆಂದ ಅನಿತಾ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ರಾಮನಗರಕ್ಕೂ, ತಮಗೂ ಹಲವು ವರ್ಷಗಳ ಅವಿನಾಭಾವ ಸಂಬಂಧವಿದೆ. ಈ ಬಾರಿ ನನ್ನನ್ನು ಗೆಲ್ಲಿಸುವ ಮೂಲಕ ಅದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು.
ಅಲ್ಲದೇ ಒಂದು ಮಹಿಳೆಯ ಮೇಲೆ ನಂಬಿಕೆ ಇಟ್ಟು ಜನ ನನ್ನನ್ನು ಗೆಲ್ಲಿಸಿದ್ದಾರೆ. ಇನ್ಮೇಲೆ ನನ್ನ ಗುರಿ ಏನಿದ್ದರೂ ರಾಮನಗರದ ಅಭಿವೃದ್ಧಿ ಎಂಬ ಮಾತನ್ನ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
Next Story