ಆರೋಗ್ಯವಾಗಿ ಇರಬೇಕೆ? ಇಲ್ಲಿದೆ 10 ಟಿಪ್ಸ್

ಆಹಾರ ಪದಾರ್ಥಗಳಲ್ಲಿ ಹಣ್ಣುಗಳು ಅತ್ಯಂತ ಆರೋಗ್ಯಕರ ಜೀವನ ಶೈಲಿಯನ್ನಾಗಿ ಶಿಫಾರಸು ಮಾಡಲಾಗಿದೆ. ಆರೋಗ್ಯವಂತರಾಗಿ ಸುಂದರವಾಗಿ ಕಾಣಲು ಹಣ್ಣುಗಳ ಸೇವನೆ ಬಹಳ ಮುಖ್ಯವಾಗಿರುತ್ತದೆ.ನಾವು ದಿನನಿತ್ಯ ಹಣ್ಣುಗಳ ಸೇವನೆ ಮಾಡುವುದರಿಂದ ದೇಹಕ್ಕೆ ಯಾವುದೇ ಆಯಾಸವಾಗುವುದಿಲ್ಲ ಮತ್ತು ಶಕ್ತಿವಂತರಾಗಲೂ ಸಹಾಕಾರಿಯಾಗಿದೆ.

ಸೇಬು ಸೇವನೆ ಮಾಡುವುದರಿಂದ ಆಸ್ಪತ್ರೆಗೆ ಹೋಗುವ ಸಂದರ್ಭ ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಆಹಾರ ಪದಾರ್ಥಗಳಲ್ಲಿ ಸೇಬಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಹಣ್ಣುಗಳು ಉತ್ತಮ ಆರೋಗ್ಯದ ಒಂದು ಭಾಗವಾಗಿವೆ.

ಹಣ್ಣುಗಳ ಸೇವನೆಯ ಜೊತೆಗೆ ತರಕಾರಿಯ ಸೇವನೆ ಕೂಡ ತುಂಬಾ ಒಳ್ಳೆಯದು. ತರಕಾರಿಗಳ ಸೇವನೆ ಕೆಲವೊಂದು ಬಾರಿ ಹಣ್ಣುಗಳ ಸೇವನೆಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

1)ಬದನೆಕಾಯಿಯಲ್ಲಿನ ನೀರು,ಪೊಟಾಷಿಯಂ ರಕ್ತದಲ್ಲಿ ಸೇರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.ಜೊತೆಗೆ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ. ಇದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು.

2) ನುಗ್ಗೆ ಗಿಡದ ಬೇರನ್ನು ಅಸ್ತಮಾ, ಹೊಟ್ಟೆಯ ತೊಂದರೆ ಅಸಿಡಿಟಿ ಮೊದಲಾದ ಸಮಸ್ಯೆಗಳಿಗೆ ಔಷಧಿಯಾಗಿ ಒಳಸಬಹುದು.

3) ಕ್ಯಾರೆಟ್ ಬಳಸುವುದರಿಂದ ಕಣ್ಣುಆರೋಗ್ಯಕರವಾಗಿರುತ್ತದೆ ಮತ್ತು ದೂರದೃಷ್ಠಿ ಚೆನ್ನಾಗಿ ಇರುತ್ತದೆ.

4) ದಾಳಿಂಬೆ ಹಣ್ಣು ಬಳಸುವುದರಿಂದ ಹೃದಯ ಒತ್ತಡ ಕಡಿಮೆಯಾಗುತ್ತದೆ.

5) ಹಾಗಲಕಾಯಿ ಶುಗರ್ ಕಾಯಿಲೆ ಇರುವವರು ಬಳಸುವುದರಿಂದ ಉತ್ತಮವಾಗಿರುತ್ತದೆ.

6) ಕುಂಬಾಳಕಾಯಿಯನ್ನು ದಪ್ಪ ಇರುವವರು ಬಳಸುವುದರಿಂದ  ಅತೀ ಬೇಗ ಸಣ್ಣ ಆಗಬಹುದು.

7)ದ್ರಾಕ್ಷಿಯನ್ನು ಬಳಸುವುದರಿಂದ ಕಿಡ್ನಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತದೆ.

8) ಈರುಳ್ಳಿಯನ್ನು ಬಳಸುವುದರಿಂದ ಅಧಿಕ ರಕ್ತ ಒತ್ತಡವನ್ನು ಕಡಿಮೆ ಮಾಡಬಹುದು.

9) ಎಲೆಕೊಸನ್ನು ಬಳಸುವುದರಿಂದ ಮೂಳೆ ಗಟ್ಟಿಯಾಗಲೂ ಸಹಕಾರಿಯಾಗುತ್ತದೆ.

10)ಸೇಬನ್ನು ಬಳಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತಾದೆ.

 

ಈ ಮೇಲಿನ ತರಕಾರಿ ಮತ್ತು ಹಣ್ಣುಗಳನ್ನು ಬಳಸುವುದರಿಂದ ನಮ್ಮ ದೇಹವು ಆರೋಗ್ಯವಾಗಿರುವುದಲ್ಲದೆ ದಿನನಿತ್ಯ ಉಲ್ಲಾಸದಿಂದ ಇರಲೂ ಸಹಕಾರಿಯಾಗುತ್ತಾದೆ.

 

Recommended For You

Leave a Reply

Your email address will not be published. Required fields are marked *