Top

ಶಬರಿಮಲೆಗೆ 50 ವರ್ಷ ದಾಟಿದ ಮಹಿಳಾ ಸಿಬ್ಬಂದಿ ಭದ್ರತೆ!

ಶಬರಿಮಲೆಗೆ 50 ವರ್ಷ ದಾಟಿದ ಮಹಿಳಾ ಸಿಬ್ಬಂದಿ ಭದ್ರತೆ!
X

ಎಲ್ಲಾ ವಯೋಮಾನದವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಕೇರಳ ಸರಕಾರ ಈ ಬಾರಿ ಬಿಗಿ ಭದ್ರತೆಯನ್ನು ಹೆಚ್ಚಿಸಿದೆ.

ಕಳೆದ ತಿಂಗಳು ಮಾಸಿಕ ಪೂಜೆಗಾಗಿ ಬಾಗಿಲು ತೆರೆದಿದ್ದಾಗ ಭಕ್ತರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಲಾಗಿರಲಿಲ್ಲ. ಸೋಮವಾರ ಸಂಜೆ ಮತ್ತೆ ಶಬರಿಮಲೆ ಬಾಗಿಲು ತೆರೆಯಲಿದೆ.

ಈ ಹಿನ್ನೆಲೆಯಲ್ಲಿ ಶಬರಿಮಲೆ ತಪ್ಪಲಲ್ಲಿ 2300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಕಮಾಂಡೊಗಳನ್ನು ಕೇರಳ ಸರಕಾರ ನಿಯೋಜಿಸಿದೆ. ದೇವಸ್ಥಾನದ ಆಡಳಿತ ಮಂಡಳಿ ಮನವಿ ಮೇರೆಗೆ 50 ವರ್ಷ ಮೇಲ್ಪಟ್ಟ ಕನಿಷ್ಠ 15 ಮಹಿಳಾ ಸಿಬ್ಬಂದಿಯನ್ನು ದೇವಸ್ಥಾನದ ಬಳಿ ನಿಯೋಜಿಸಲಾಗಿದೆ.

ಸೋಮವಾರ ಸಂಜೆ 5 ಗಂಟೆಗೆ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಪೂಜೆ ನೆರವೇರಲಿದೆ. ನಂತರ ರಾತ್ರಿ 10 ಗಂಟೆಗೆ ಮತ್ತೆ ಬಾಗಿಲು ಮುಚ್ಚಲಾಗುವುದು.

ಈ ಬಾರಿ ಅಯ್ಯಪ್ಪನ ದರ್ಶನಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಭಕ್ತರು ಮೂಲ ಸ್ಥಳವಾದ ನಿಳಕ್ಕಲ್ ಬಳಿ ನೆರೆದಿದ್ದಾರೆ.

Next Story

RELATED STORIES