Top

ಆಸ್ತಿಗಾಗಿ ಪತಿಯ ಕೊಲೆಗೆ ಸುಪಾರಿ ಕೊಟ್ಟ ಪತ್ನಿ..!

ಆಸ್ತಿಗಾಗಿ ಪತಿಯ ಕೊಲೆಗೆ ಸುಪಾರಿ ಕೊಟ್ಟ ಪತ್ನಿ..!
X

ಬೆಂಗಳೂರು: ಕೋಟಿಗಟ್ಟಲೇ ಆಸ್ತಿ ಹೊಡೆಯಲು ಮೈದುನನ ಜೊತೆ ಸೇರಿದ ಹೆಂಡತಿ, ತನ್ನ ಗಂಡನ ಹತ್ಯೆಗೆ ಸ್ಕೇಚ್ ಹಾಕಿ, ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿ ಈ ಘಟನೆ ನಡೆದಿದೆ.

ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವಿ ಮೂಲದ ರಂಗಸ್ವಾಮಿ ಎಂಬ ವ್ಯಕ್ತಿಗೆ ತನ್ನ ಹೆಂಡತಿ ನೇತ್ರಾವತಿ ಹಾಗೂ ಸಂಬಂಧಿಗಳೇ ಈ ಕೃತ್ಯವನ್ನ ಎಸಗಿದ್ದಾರೆ ಎಂದು, ಹಲ್ಲೆಗೊಳಗಾಗಿರುವ ವ್ಯಕ್ತಿ ರಂಗಸ್ವಾಮಿ ಆರೋಪಿಸಿದ್ದಾರೆ.

ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಹೆಂಡತಿ ನೇತ್ರಾವತಿ, ತಮ್ಮ ಲೋಕೇಶ್, ಹಾಗೂ ಮಾವ ರಾಜಣ್ಣರ ವಿರುದ್ದ ದೂರು ದಾಖಲು ಮಾಡಿದ್ದಾರೆ.

ಇನ್ನು ಈ ಹಲ್ಲೆ ಪ್ರಕರಣಕ್ಕೆ ಸಂಬ್ಬಂದಿಸಿದಂತೆ ಪತಿ ರಂಗಸ್ವಾಮಿ ಮೇಲೆ ನಾಲ್ಕೈದು ಬಾರಿ ಅಟ್ಯಾಕ್ ಮಾಡಿದ್ದು, ಹೆಂಡತಿ ನೇತ್ರಾವತಿ ಹಾಗೂ ತಮ್ಮ ಲೋಕೇಶ್ ಎಂಬುದರ ನಡುವಿನ ಅಕ್ರಮ ಸಂಬಂಧವೇ ಕಾರಣವೆಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇತ್ತ ಪ್ರಾಣ ಭಯದಿಂದ ಪತಿ ರಂಗಸ್ವಾಮಿ ಈಗಾಗಲೇ ಊರು ಬಿಟ್ಟು ಪಟ್ಟಣ ಸೇರಿದ್ದಾರೆ. ಇನ್ನೂ ತನ್ನ ಹೆಂಡತಿ, ತನ್ನ ಒಡಹುಟ್ಟಿದ ತಮ್ಮನ ಮತ್ತು ಸಂಬಂಧಿಗಳ ಆಸ್ತಿ ಲಪಟಾಯಿಸುವ ಕೃತ್ಯದಿಂದ, ಬಳಲಿ ಹೋಗಿದ್ದು ಪ್ರಾಣ ಉಳಿಸಿಕೊಳ್ಳಲು ಮತ್ತು ನ್ಯಾಯಕ್ಕಾಗಿ ರಂಗಸ್ವಾಮಿ ಪೊಲೀಸರ ಸೂಕ್ತ ನೆರವು ಸಿಗದೇ ಪರದಾಡುವಂತಾಗಿದ್ದಾರೆ.

Next Story

RELATED STORIES