Top

ಸಂಚಾರ ನಿಯಮ ಪಾಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ!

ಸಂಚಾರ ನಿಯಮ ಪಾಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ!
X

ಗೂಟದ ಕಾರಿನ ಸಂಸ್ಕೃತಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದ್ದರೂ ರಾಜಕಾರಣಿಗಳ ವಿಐಪಿ ಸಂಸ್ಕೃತಿಗೆ ಯಾವುದೇ ಧಕ್ಕೆ ಬಂದಿಲ್ಲ. ಆದರೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೋಮವಾರ ಸಂಚಾರ ನಿಯಮ ಪಾಲಿಸುವ ಮೂಲಕ ಸಾಮಾನ್ಯರಂತೆ ಪ್ರಯಾಣಿಸಿ ಗಮನ ಸೆಳೆದರು.

ಮುಖ್ಯಮಂತ್ರಿ ಅಂದಮೇಲೆ ಕೇಳಬೇಕೆ? ಬಿಡುವಿಲ್ಲದ ವೇಳಾಪಟ್ಟಿ. ಹಾಗಾಗಿ ಅವರಿಗೆ ಸಂಚಾರ ನಿಯಮ ಅನ್ವಯ ಆಗುವುದಿಲ್ಲ. ಪೊಲೀಸರು ಅವರು ಬರುವ ದಾರಿಯಲ್ಲಿ ಸಿಗ್ನೆಲ್ ತೆರವುಗೊಳಿಸಿ ಸರಾಗವಾಗಿ ಸಂಚರಿಸಲು ಅನುವು ಮಾಡಿಕೊಡುವುದು ಸಾಮಾನ್ಯ.

ಆದರೆ ಸೋಮವಾರ ಇದಕ್ಕೆ ಅಪವಾದ ಎಂಬಂತೆ ಸಿಎಂ ಕುಮಾರಸ್ವಾಮಿ ತಮ್ಮ ಬೆಂಗಾವಲು ವಾಹನವನ್ನು ಬಿಟ್ಟು, ಸಾಮಾನ್ಯರಂತೆ ಸಂಚಾರಿ ನಿಯಮವನ್ನು ಪಾಲಿಸಿಕೊಂಡು ಬೆಂಗಳೂರಿನ ಖಾಸಗಿ ಹೋಟೆಲ್​ನಿಂದ ಹೊರಟು ಪದ್ಮನಾಭನಗರದ ತಮ್ಮ ನಿವಾಸಕ್ಕೆ ತೆರಳಿದರು.

ಮುಖ್ಯಮಂತ್ರಿ ಆದ ಬಳಿಕ ಮೊಟ್ಟ ಮೊದಲ ಬಾರಿಗೆ ಯಾವುದೇ ಭದ್ರತ ಸಿಬ್ಬಂದಿ ಇಲ್ಲದೇ ತೆರಳಿದ್ದಾರೆ.ಇನ್ನೂ ಮಾರ್ಗ ಮಧ್ಯೆ ಜನಸಾಮನ್ಯರಂದೆ ಟ್ರಾಫಿಕ್​ನಲ್ಲಿ ಪ್ರಯಾಣ ಮಾಡಿದ್ದಲ್ಲದೇ, ಸಿಗ್ನಲ್​ನಲ್ಲಿ ವಾಹನ ನಿಲ್ಲಿಸಿ ಟ್ರಾಫಿಕ್ ರೂಲ್ಸ್​ನ್ನು ಫಾಲೋ ಮಾಡಿದ್ದಾರೆ. ಈ ರೀತಿ ಸುಮಾರು 10 ನಿಮಿಷಗಳ ಕಾಲ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡರೂ ಸಿಡಿಮಿಡಿಗೊಳ್ಳದೇ ಸಾಗಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ವಾಹನದ ಮುಂದೆ ಎರಡು ಭದ್ರತಾ ವಾಹನ, ಹಿಂಬದಿಯಲ್ಲಿ ಎರಡು ವಾಹನ ಇರುತ್ತಿತ್ತು. ಆದ್ರೆ ಇದೆಲ್ಲವನ್ನೂ ಬಿಟ್ಟು ಜನಸಾಮಾನ್ಯರಂತೆ ಹೊರಟು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನ ಟ್ರಾಫಿಕ್ ಅನುಭವ ಪಡೆದಿದ್ದಾರೆ.

Next Story

RELATED STORIES