Top

5 ಕ್ಷೇತ್ರಗಳ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

5 ಕ್ಷೇತ್ರಗಳ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ
X

ವಿಧಾನಸಭೆ ಹಾಗೂ 3 ಲೋಕಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಮತದಾರನ ನಿರ್ಣಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. 5 ಕ್ಷೇತ್ರಗಳ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುವಾಗಿದ್ದು, ವಿಜಯದ ಮಾಲೆ ಯಾರಿಗೆ ಒಲಿಯಲಿದೆ ಅನ್ನೋ ಕುತೂಹಲ ಮೂಡಿದೆ.

ರಾಮನಗರ ಉಪಕದನ ನಾಳೆ ನಡೆಯುವ ಮತಏಣಿಕೆಗೆ ಜಿಲ್ಲಾಢಳಿತ ಸಕಲ ಸಿದ್ದತೆಗೊಂಡಿದೆ. ನಗರದ ಪ್ರಥಮ ದರ್ಜಿ ಕಾಲೇಜಿನಲ್ಲಿ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಆರಂಭವಾಗಲಿದೆ. ಪ್ರತಿ ಸುತ್ತಿನಲ್ಲೂ 14 ಮತಗಟ್ಟೆಗಳನ್ನು ಮತ ಏಣಿಕೆ ನಡೆಸಲಾಗುತ್ತದೆ. ಮತ ಏಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ 40 ಸಿಬ್ಬಂದಿ ನಿಯೋಜಿಸಲಾಗಿದೆ. ಇನ್ನು ಮತಏಣಿಕೆಯ ಸುತ್ತ ಬಿಗಿ ಪೋಲೀಸ್ ಬಂದೂ ಬಸ್ತ್ ಕಲ್ಪಿಸಲಾಗಿದೆ.

ಇನ್ನು ಗಣಿ ಜಿಲ್ಲೆ ಬಳ್ಳಾರಿಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಬೆಳ್ಳಗೆ 8 ಘಂಟೆಯಿಂದ ಆರಂಭವಾದ ಮತ ಎಣಿಕೆ ಮಧ್ಯಾಹ್ನ 12 ಘಂಟೆಗೆ ಮುಗಿಯಲಿದೆ. ಮತ ಎಣಿಕೆ ಕೇಂದ್ರದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಇನ್ನೂ 360 ಸಿಬ್ಬಂದಿ ಮತ ಎಣಿಕೆಯಲ್ಲಿ ಭಾಗಿಯಾಗಿರುತ್ತಾರೆ. ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಏಣಿಕೆಗೆ ನಾಳೆ 8ರಿಂದ ಆರಂಭ ಆಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಸುಮಾರು 20 ರೂಂಗಳಲ್ಲಿ 17 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿ ಗಳಾದ ಎಲ್.ಆರ್.ಶಿವರಾಮೇಗೌಡ, ಡಾ.ಸಿದ್ದರಾಮಯ್ಯ ಅವರ ಹಣೆ ಬರಹ ನಿರ್ಧಾರ ಆಗಲಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಬೈ ಎಲೆಕ್ಷನ್ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ನಾಳೆ ಬೆಳಿಗ್ಗೆ 8 ಗಂಟೆಯಿಂದ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ. ಮತ ಎಣಿಕೆಗಾಗಿ, 20 ಮೇಲ್ವಿಚಾರಕರು,20ಸಹಾಯಕರು, 20 ಮೈಕ್ರೋ ಅಬ್ಜರ್ವರ್ ಗಳನ್ನ ನೇಮಿಸಲಾಗಿದೆ. ಇನ್ನು ಮತ ಎಣಿಕೆ ಸುತ್ತಮುತ್ತ ನೂರು ಮೀಟರ್ ವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.

ಇನ್ನು ಸಾಕಷ್ಟು ಜಿದ್ದಾಜಿದ್ದಿಯಿಂದ ಕೂಡಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮತ ಏಣಿಕೆ ನಾಳೆ ಬೆಳಿಗ್ಗೆ 8 ಗಂಟೆಗೆ ಮತಏಣಿಕೆ ಆರಂಭವಾಗಲಿದೆ.. ಒಟ್ಟು 16 ಕೊಠಡಿಗಳಲ್ಲಿ ಹಾಕಲಾಗಿರುವ 112 ಟೇಬಲ್ ಗಳಲ್ಲಿ ಮತಏಣೀಕೆ ನಡೆಯಲಿದ್ದು, ಈ ಮತ ಏಣೀಕೆ ಕಾರ್ಯದಲ್ಲಿ ಒಟ್ಟು 336 ಸಿಬ್ಬಂದಿ ನೇಮಕ ಮಾಡಿದ್ದಾರೆ.

ಒಟ್ನಲ್ಲಿ 5 ಕ್ಷೇತ್ರಗಳ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುವಾಗಿದ್ದು ,ನಾಳೆ ಮತದಾರ ಪ್ರಭುಗಳು ಯಾರಿಗೆ ವಿಜಯದ ಮಾಲೆ ಹಾಕ್ತಾರೆ ಅನೋದು ಕುತೂಹಲ ಮೂಡಿದೆ.

Next Story

RELATED STORIES