ವಿರಾಟ್ಗೆ ಅನುಷ್ಕಾ ಹೇಗೆ ವಿಶ್ ಮಾಡಿದ್ರು ಗೊತ್ತಾ..?

X
TV5 Kannada5 Nov 2018 10:44 AM GMT
ಇಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಜನ್ಮದಿನವಾಗಿದ್ದು, ಪತ್ನಿ ಅನುಷ್ಕಾ ಶರ್ಮಾ ವಿರಾಟ್ಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.
ವಿರಾಟ್ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅನುಷ್ಕಾ ಟ್ವಿಟರ್ನಲ್ಲಿ ತಮ್ಮ ಫೋಟೋವನ್ನ ಶೇರ್ ಮಾಡುವ ಮೂಲಕ ಬರ್ತ್ಡೇ ವಿಶ್ ಮಾಡಿದ್ದಾರೆ.
ಸಾಮಾನ್ಯವಾಗಿ ಹುಟ್ಟುಹಬ್ಬಕ್ಕೆ ಎಲ್ಲರೂ ಹ್ಯಾಪಿ ಬರ್ತ್ಡೇ ಅಂತಾ ವಿಶ್ ಮಾಡಿದ್ರೆ, ಅನುಷ್ಕಾ ವಿರಾಟ್ಗೆ, "Thank God for his birth" ಎಂದು ವಿಶ್ ಮಾಡಿದ್ದಾರೆ.
ಸದ್ಯ ಅನುಷ್ಕಾ ಶರ್ಮಾ ಜೀರೋ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿ ಇದ್ದು, ಅದರ ನಡುವೆ ಬಿಡುವು ಮಾಡಿಕೊಂಡು ವಿರಾಟ್ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ಇದು ವಿಶೇಷ ದಿನವಾಗಿದ್ದು, ವಿವಾಹವಾದ ಮೇಲೆ ಮೊದಲನೇ ಹುಟ್ಟು ಹಬ್ಬವಾಗಿದೆ.
Next Story