ಮುಂದಿನ ಐಪಿಎಲ್​ನಲ್ಲಿ ಡೆಲ್ಲಿ ಪರ ಆಡಲಿದ್ದಾರೆ ಶಿಖರ್ ಧವನ್

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ ಮನ್ ಶಿಖರ್ ಧವನ್ ಮುಂಬರುವ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್ ತಂಡದ ಪರ ಆಡಲಿದ್ದಾರೆ. ಈ ವಿಷಯವನ್ನ ಸನ್​ರೈಸರ್ಸ್​ ಹೈದ್ರಾಬಾದ್ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ.

ಡೆಲ್ಲಿ ಡ್ಯಾಶರ್ ಧವನ್ ಸನ್​ರೈಸರ್ಸ್​ ಫ್ರಾಂಚೈಸಿಯಿಂದ ಸಿಗುತ್ತಿರುವ ವೇತನ ಕುರಿತು ಅಸಮಾಧಾನಗೊಂಡಿದ್ದರು . ಕಳೆದ ಬಾರಿಯ ಹರಾಜಿನಲ್ಲಿ ಧವನ್​ ಅವರನ್ನ ರೈಟ್​ ಟು ಮ್ಯಾಚ್ ಬಳಸಿ ಡೆಲ್ಲಿ ಫ್ರಾಂಚೈಸಿ 5.2 ಕೋಟಿ ರೂಪಾಯಿಗೆ ಖರೀದಿಮಾಡಿತ್ತು.

ಹೀಗಾಗಿ ಕೆಲವು ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನೊಂದು ವರದಿಯ ಪ್ರಕಾರ ಡೆಲ್ಲಿ ಫ್ರಾಂಚೈಸಿ ಧವನ್ ಜೊತೆ ಡೀಲ್ ನಡೆಸಿತ್ತು ಎಂದು ಹೇಳಿತ್ತು.

2008ರ ಚೊಚ್ಚಲ ಐಪಿಎಲ್ ನಲ್ಲಿ ಶಿಖರ್ ಧವನ್ ಡೆಲ್ಲಿ ತಂಡ ಪರ ಆಡಿದ್ದರು. ಇದೀಗ ಹತ್ತು ವಷ್ಘಲ ಬಳಿಕ ಈ ಡೆಲ್ಲಿ ಡ್ಯಾಶರ್ ತವರು ತಂಡಕ್ಕೆ ಮತ್ತೆ ಮರಳಿದ್ದಾರೆ. ಧವನ್​ರನ್ನ ಸೇರಿಸಿಕೊಂಡಿರುವ ಡೆಲ್ಲಿ ಫ್ರಾಂಚೈಸಿ ತಂಡದ ಅಟಗಾರರಾದ ಅಭಿಷೇಕ್ ಶರ್ಮಾ, ಆಲ್​ರೌಂಡರ್​ ವಿಜಯ್​ ಶಂಕರ್ ಮತ್ತು ಶಾಬಾಜ್ ನದೀಂ ಅವರನ್ನ ತಂಡದಿಂದ ಕೈಬಿಟ್ಟಿದೆ.