ಡಿ.ಕೆ ಬ್ರದರ್ಸ್ ಹೊಡೆತಕ್ಕೆ ನಲುಗಿದ ಸಿ.ಪಿ.ಯೋಗೇಶ್ವರ್..?

ರಾಮನಗರ: ಉಪ ಚುನಾವಣೆ ಸಮೀಪಿಸುತ್ತಿರುವಾಗಲೇ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಇದಕ್ಕೆಲ್ಲ ಕಾರಣ ಸಿ.ಪಿ.ಯೋಗೇಶ್ವರ್ ಎಂದು ಬಿಜೆಪಿಯವರೇ ಯೋಗೇಶ್ವರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಡುವಲ್ಲಿ ಯೋಗೇಶ್ವರ್ ವಿಫಲವಾಗಿದ್ದಾರೆ. ಅಲ್ಲದೇ ತಾವು ಸ್ವತಃ ಚನ್ನಪಟ್ಟಣದಲ್ಲಿ ಚುನಾವಣೆಗೆ ನಿಂತು ಸೋಲು ಕಂಡಿದ್ದು, ಸಿ.ಪಿ.ಯೋಗೇಶ್ವರ್ ಅವರ ಮತ್ತೊಂದು ವೈಫಲ್ಯವಾಗಿದೆ.
ಅಲ್ಲದೇ ಚಂದ್ರಶೇಖರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿಯಲು ಕಾರಣ, ಡಿ.ಕೆ.ಶಿವಕುಮಾರ್ ಎಂಬ ಮಾತು ಕೇಳಿಬಂದಿದೆ. ಈ ಮೂಲಕ ಯೋಗೇಶ್ವರ್ಗೆ ಬಿಜೆಪಿ ಅಭ್ಯರ್ಥಿ ಹೈಜಾಕ್ ವಿಚಾರದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಈ ಎಲ್ಲ ಕಾರಣಕ್ಕಾಗಿ ಸಿ.ಪಿ.ಯೋಗೇಶ್ವರ್ ವಿರುದ್ಧ ಬಿಜೆಪಿಯಲ್ಲಿಯೇ ಅಸಮಾಧಾನ ಹೊರಬಿದ್ದಿದೆ ಎಂಬ ಮಾತು ಕೇಳಿಬಂದಿದೆ.
ಇನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕೊಟ್ಟ ಶಾಕ್ಗೆ ಯೋಗೇಶ್ವರ್ ಸ್ವಕ್ಷೇತ್ರ ಚನ್ನಪಟ್ಟಣಕ್ಕೂ ಹೋಗದೇ ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ.