Top

ಟಿಪ್ಪು ಜಯಂತಿ ಆಚರಣೆ ಖಂಡಿಸಿ ನ.9ರಂದು ಹೋರಾಟ: ಆರ್. ಅಶೋಕ್

ಟಿಪ್ಪು ಜಯಂತಿ ಆಚರಣೆ ಖಂಡಿಸಿ ನ.9ರಂದು ಹೋರಾಟ: ಆರ್. ಅಶೋಕ್
X

ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಖಂಡಿಸಿ ನವೆಂಬರ್ 9ರಂದು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ನಿಮಗೆ ಧಮ್ ಇದ್ದರೆ ನಮ್ಮನ್ನೂ ಅರೆಸ್ಟ್ ಮಾಡಿ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಪರ್ಷಿಯನ್ ಭಾಷೆಯ ಪ್ರೇಮಿ. ಅಂತವರ ಜಯಂತಿಯನ್ನು ಈ ಸರ್ಕಾರ ಆಚರಣೆ ಮಾಡುತ್ತಿದೆ. ಈ ಸರ್ಕಾರದ ಧೋರಣೆ ವಿರುದ್ದ ನಾವು ನವೆಂಬರ್ 9ರಂದು ಪ್ರತಿಭಟನೆ ಮಾಡುತ್ತೇವೆ. ಓಟಿನ ರಾಜಕಾರಣಕ್ಕೆ ನೀವು ಟಿಪ್ಪು ಜಯಂತಿ ಆಚರಣೆ ಮಾಡ್ತಿದ್ದೀರ. ಹಾಗೇನಾದರೂ ಮಾಡುವುದಾದರೆ ಕಲಾಂ, ಶರೀಫರ ಜಯಂತಿ ಆಚರಿಸಿ. ನಿಮಗೆ ಟಿಪ್ಪುನೇ ಯಾಕೇ ಬೇಕು ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರಕ್ಕೆ ಸಾಮರಸ್ಯ ಬೇಕಿಲ್ಲ. ಹಿಂದೂಗಳ ಹತ್ಯೆ ಮಾಡಿದ ಕಾರಣಕ್ಕಾಗಿಯೇ ನಿಮಗೆ ಟಿಪ್ಪು ಜಯಂತಿ ಬೇಕಾಗಿದೆ. ಕನ್ನಡ ವಿರೋಧಿ ಟಿಪ್ಪು ಜಯಂತಿ ಆಚರಣೆ ಮಾಡುವುದರಿಂದ ಒನಕೆ ಓಬವ್ವ, ವೀರ ಮದಕರಿ ನಾಯಕರಿಗೆ ಅಪಮಾನ ಮಾಡಿದಾಗೆ ಹಾಗೂತ್ತಾದೆ. ಮತಾಂಧ, ಜಿಹಾದಿಗಳಿಗೆ ಖುಷಿಯಾಗುತ್ತದೆಯೇ ಹೊರತು ಕನ್ನಡಿಗರಿಗೆ ಸಂತೋಷ ತರಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ಟಿಪ್ಪು ಜಯಂತಿ ವೇಳೆ ತಟಸ್ಥವಾಗಿದರು. ಆದರೆ ಈ ಬಾರಿ ತಟಸ್ಥ ಬಿಟ್ಟು ಹಸ್ತದ್ದತ್ತ ಮುಖ ಮಾಡಿದ್ದಾರೆ.ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕಿಸಿದರು ಮಾಜಿ ಡಿಸಿಎಂ ಅಶೋಕ್ ಹೇಳಿದರು.

ನಂತರ ಮಂಡ್ಯ ಲೋಕಸಭೆ ಉಪ‌ ಚುನಾವಣೆಯ ಬಗ್ಗೆ ಮಾತನಾಡಿದ ಆರ್ ಅಶೋಕ್ ಈ ಭಾರೀ ಸರ್ಪ್ರೈಸ್ ರಿಸಲ್ಟ್ ಸಿಗಲಿದೆ. ಮಂಡ್ಯದಲ್ಲಿ ಬಿಜೆಪಿ‌ ಹೆಚ್ಚಿನ ಬಹುಮತದಿಂದ ಗೆಲ್ಲಲಿದೆ. ಡಾ.ಸಿದ್ದರಾಮಯ್ಯನವರಿಗೆ ಮುಂಚಿತವಾಗಿ ಶುಭಾಶಯ ತಿಳಿಸುತ್ತೇನೆ. ಮಂಡ್ಯದ ಜನರು ಹೆಚ್ಚು ಪ್ರೀತಿ ತೋರಿದ್ದಾರೆ. ಹಾಗಾಗಿ ಮಾಜಿ ಸಿಎಂ ಎಸ್‌ಎಂ ಕೃಷ್ಣರ ರೀತಿಯಲ್ಲಿ ಗೆಲುವು ಬರಲಿದೆ ಎಂದು ನುಡಿದರು.

ಉಪಚುನಾವಣೆ ಕುರಿತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯವನ್ನು ಟೀಕಿಸಿದ್ದು. ತಾನೆ ಸೋತು ಬೇರೆಯವರ ಗೆಲುವಿನ ಬಗ್ಗೆ ಭವಿಷ್ಯ ನುಡಿತಾರಾ.? ಸಿದ್ದರಾಮಯ್ಯ ಭವಿಷ್ಯ ವಿಧಾನಸಭೆ ಚುನಾವಣೆಯಲ್ಲೆ ನಿಜವಾಗಲಿಲ್ಲ. ಈಗ ಅದನ್ನೆಲ್ಲ ಹೇಳಿದರೆ ನಿಜವಾಗುತ್ತಾ ಎಂದರು.

ಬೆಂಗಳೂರಿನಲ್ಲು ರಾಮಮಂದಿರ ನಿರ್ಮಾಣ ಮಾಡುವ ಚಿಂತನೆ ಇದೆ. ಆ ಬಗ್ಗೆ ನಮ್ಮೊಂದು ಟೀಮ್ ಚರ್ಚೆ ಮಾಡುತ್ತಿದೆ.ನಾನು ಸಹ ಅವರೊಂದಿಗೆ ಮಾತನಾಡಿದ ನಿರ್ಧಾರ ಕೈಗೊಳ್ಳುತ್ತೇವೆ.ರಾಮ ಆದರ್ಶ ಪುರುಷ ಅವನಿಗೆ ಇಡೀ ಭಾರತ ಗೌರವ ನೀಡುತ್ತೆ. ರಾಮನ ಮಂದಿರ ಕಟ್ಟಲು ಭಾರತೀಯರೆಲ್ಲರು ಸಹಕಾರ ನೀಡ್ತಾರೆ. ಬೆಂಗಳೂರಿನಲ್ಲು ರಾಮ ಮಂದಿರ ನಿರ್ಮಿಸಲು ಚರ್ಚೆ ನಡೆದಿದೆ ಎಂದು ಹೇಳಿದರು.

Next Story

RELATED STORIES