ತನಿಖಾಧಿಕಾರಿಗಳ ಪ್ರಶ್ನೆಗೆ ಹೇಗೆ ಉತ್ತರಿಸಿದ್ರು ಗೊತ್ತಾ ‘ಜಂಟಲ್‌ಮ್ಯಾನ್’..?

ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಯಲ್ಲಿ, ನಟ ಅರ್ಜುನ್‌ಗೆ ಸತತ 3 ಗಂಟೆಗಳ ಕಾಲ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಲಾಯಿತು. ಎಲ್ಲ ಪ್ರಶ್ನೆಗಳಿಗೂ ಸರ್ಜಾ ಹೇಗೆ ಉತ್ತರಿಸಿದ್ರು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ…

ಪೊಲೀಸ್:-ವಿಸ್ಮಯ ಚಿತ್ರಕ್ಕೆ ಕಲಾವಿದರ ಆಯ್ಕೆ ಮಾಡುವಾಗ ನೀವು ಕೂಡ ಆ ಆಡಿಷನ್ ಅಲ್ಲಿ ಇದ್ರಾ ..?
ಸರ್ಜಾ:-ನಾನು ಆ ಆಡಿಷನ್ ಅಲ್ಲಿ ಇರ್ಲಿಲ್ಲ.. ಅರುಣ್ ಅವರು ಆಡಿಷನ್ ಮಾಡಿದ್ರು ಆಯ್ಕೆಯನ್ನು ಅವರೇ ಮಾಡಿದ್ದಾರೆ. ಅರುಣ್ ಹೆಸರು ಹೇಳಿದಾಗ್ಲೆ ನನಗೆ ಗೊತ್ತಾಗಿದ್ದು..

ಪೊಲೀಸ್:-ಶೃತಿ ಹರಿಹರನ್ ಅವರ ಜೊತೆ ಚಿತ್ರದಲ್ಲಿ ನಟಿಸುವ ಮುನ್ನ ಎಲ್ಲಿಯಾದರೂ ಭೇಟಿಯಾಗಿದ್ರಾ ..?
ಅರ್ಜುನ್ ಸರ್ಜಾ:-ಆಕೆಯ ಪರಿಚಯ ಇರ್ಲಿಲ್ಲ, ಭೇಟಿ ಮಾಡುವ ಪ್ರಶ್ನೆಯೇ ಇಲ್ಲ ಚಿತ್ರ ಪ್ರಾರಂಭದ ಬಳಿಕ ಅಷ್ಟೇ ಮುಖಾಮುಖಿ ನೋಡಿದ್ದು..

ಪೊಲೀಸ್:-ಯಾವಾಗ ಚಿತ್ರ ಪ್ರಾರಂಭ ಆಯಿತು ಅಂತ ನಿಮಗೇನಾದರೂ ಗೊತ್ತಿದ್ಯಾ..?
ಸರ್ಜಾ:-ಬಹುಶಃ ಅಕ್ಟೋಬರ್ 2015 ರಲ್ಲಿ ಚಿತ್ರೀಕರಣ ಪ್ರಾರಂಭ ಆಗಿದ್ದು..

ಪೊಲೀಸ್:-ಆ ಚಿತ್ರದಲ್ಲಿ ನಿಮ್ಮ ಪಾತ್ರ ಹಾಗೂ ಶೃತಿ ಪಾತ್ರದ ಬಗ್ಗೆ ನೆನಪು ಇದ್ಯಾ..?
ಸರ್ಜಾ:-ವಿಸ್ಮಯ ಚಿತ್ರದಲ್ಲಿ ನಾನು ಡಿವೈಎಸ್ಪಿ ಪಾತ್ರವನ್ನು ನಿರ್ವಹಣೆ ಮಾಡಿದ್ದೇನೆ.. ಇನ್ವೇಸ್ಟಿಗೇಷನ್ ಲೀಡ್ ಮಾಡುವ ಪಾತ್ರ ಅದು.. ಶೃತಿ ಹರಿಹರನ್ ಅವರು ಆ ಚಿತ್ರದಲ್ಲಿ ನನ್ನ ಪತ್ನಿಯ ಪಾತ್ರವನ್ನು ಮಾಡಿದ್ದಾರೆ.. ಆಕೆಗೆ ಆ ಚಿತ್ರದಲ್ಲಿ ಫೈಂಟಿಂಗ್ ಹಾಬಿ ಇರುತ್ತೆ..

ಪೊಲೀಸ್:-ಚಿತ್ರದಲ್ಲಿ ಅನವಶ್ಯಕವಾಗಿ ರೊಮ್ಯಾಂಟಿಕ್ ಸೀನ್ ಬಳಸಿದ್ದಾರಂತೆ ಹೌದಾ ..?
ಸರ್ಜಾ:-ಅದು ನಿರ್ದೇಶಕರಿಗೆ ಬಿಟ್ಟ ವಿಚಾರ, ನಾನು ಹೇಳಿದಂತೆ ನಿರ್ದೇಶಕ ಚಿತ್ರವನ್ನು ಚಿತ್ರೀಕರಣ ಮಾಡೋದಿಲ್ಲ. ನಿರ್ದೇಶಕ ಹೇಳಿದಂತೆ ನಾವು ಪಾತ್ರ ಮಾಡ್ಬೇಕು.. ನಾನು ಹೇಳಿದ ಸೀನ್ ಅವರು ಇಡೋದಿಲ್ಲ.

ಪೊಲೀಸ್:-ಚಿತ್ರದಲ್ಲಿ ನೀವು ಹರಿಹರನ್ ಅವರ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿದ್ದೀರಿ..?
ಸರ್ಜಾ:-ಸಾಧ್ಯವೇ ಇಲ್ಲ, ಆಕೆಯನ್ನು ನಾನು ಒಬ್ಬ ಕಲಾವಿದೆಯಾಗಿ ನೋಡಿದ್ಧೀನಿ ಹೊರತು ಕೆಟ್ಟ ದೃಷ್ಟಿಯಿಂದ ಆಕೆಯನ್ನು ನೋಡಿಲ್ಲ.

ಪೊಲೀಸ್:--ರಿಹರ್ಸಲ್ ಎಲ್ಲಿ ನಡೆಯಿತು ಅನ್ನೋ ನೆನಪು ನಿಮಗೆ ಇದ್ಯಾ..?
ಸರ್ಜಾ:--ಹೌದು, ಹೆಬ್ಬಾಳದ ಬಳಿಯಲ್ಲಿ ಇರುವ ಕೆಂಪಾಪುರದ ಒಂದು ಬಂಗಲೆಯಲ್ಲಿ ರಿಹರ್ಸಲ್ ನಡೆಯಿತು. ಅಲ್ಲಿಯೇ ಚಿತ್ರೀಕರಣವನ್ನು ಮಾಡಿದ್ದಾರೆ.

ಪೊಲೀಸ್:-ರಿಹರ್ಸಲ್ ಎಲ್ಲಿ ನಡೆಯಿತು ಅನ್ನೋ ನೆನಪು ನಿಮಗೆ ಇದ್ಯಾ..?
ಸರ್ಜಾ:--ಹೌದು, ಹೆಬ್ಬಾಳದ ಬಳಿಯಲ್ಲಿ ಇರುವ ಕೆಂಪಾಪುರದ ಒಂದು ಬಂಗಲೆಯಲ್ಲಿ ರಿಹರ್ಸಲ್ ನಡೆಯಿತು. ಅಲ್ಲಿಯೇ ಚಿತ್ರೀಕರಣವನ್ನು ಮಾಡಿದ್ದಾರೆ.

ಪೊಲೀಸ್:-ರಿಹರ್ಸಲ್ ಮಾಡುವಾಗ ನೀವು ಆಕೆಯ ಖಾಸಗಿ ಜಾಗಗಳನ್ನು ಮುಟ್ಟಿದ್ದೀರಿ..?
ಸರ್ಜಾ:-ಇಲ್ಲ ಇದೆಲ್ಲಾ ಸುಳ್ಳು, ರಿಹರ್ಸಲ್ ಅಂದ್ರೆ ನಾವಿಬ್ಬರೇ ಮಾಡೋದಲ್ಲ.. ಸಾಕಷ್ಟು ಜನ ನಮ್ಮ ಮುಂದೆಯೇ ಇರುತ್ತಾರೆ. ಅವರುಗಳ ಮುಂದೆ ಈ ರೀತಿ ಮಾಡಲು ಸಾಧ್ಯನಾ ?

ಪೊಲೀಸ್:--ನೀವು ಮಾಡಿದ ಅನುಚಿತ ವರ್ತನೆಗೆ ಆಕೆ ಪ್ರತಿಭಟಿಸಿದ್ದರಂತೆ ಹೌದಾ..?
ಸರ್ಜಾ:-ನಾನು ನೋಡಿದ ಹಾಗೆ, ನನ್ನ ಗಮನಕ್ಕೆ ಬಂದ ಹಾಗೆ ಆಕೆ ಪ್ರತಿಭಟಿಸಿಲ್ಲ.

ಪೊಲೀಸ್:-ಕ್ಯಾರಾವ್ಯಾನ್ ಅಲ್ಲಿ ಕಣ್ಣೀರು ಹಾಕಿದ ಬಗ್ಗೆ ಅವರು ಹೇಳ್ತಾರೆ ..?
ಸರ್ಜಾ:-ಶೃತಿ ಹರಿಹರನ್ ಅವರು ನನ್ನ ಮುಂದೆಯಾಗಲಿ, ನಿರ್ದೇಶಕರ ಮುಂದೆಯಾಗಲಿ ಕಣ್ಣೀರು ಹಾಕಿಲ್ಲ. ಅವರು, ಕಣ್ಣೀರು ಹಾಕಿರೋದು ನನ್ನ ಗಮನಕ್ಕೆ ಬಂದಿಯೇ ಇಲ್ಲ.

ಪೊಲೀಸ್:–ಆಕೆಯೊಂದಿಗೆ ನೀವು ಅನುಚಿತವಾಗಿ ವರ್ತನೆ ಮಾಡಿಲ್ವಾ..?
ಸರ್ಜಾ:--ರಿಹರ್ಸಲ್ ಸಂದರ್ಭದಲ್ಲಿ ನಾನು ಆಕೆಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿಲ್ಲ. ಕ್ಯಾರಾವ್ಯಾನ್ ಅಲ್ಲಿ ಅಳೋದು ಇದ್ದಿದ್ರೆ ಘಟನೆ ನಡೆದ ತಕ್ಷಣ ಎಲ್ಲರ ಮುಂದೆಯೇ ಪ್ರತಿಭಟಿಸಬಹುದಿತ್ತು..

ಇಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಅರ್ಜುನ್ ಸರ್ಜಾ ಕಾನ್ಫಿಡೆನ್ಸ್ನಿಂದ ಮಾಧ್ಯಮದೆಡೆಗೆ ನಗೆ ಬೀರಿ ಹೊರ ನಡೆದರು.