'ಬದುಕಿರೋವರೆಗೂ ರೇವಣ್ಣ ಶಾಸಕರಾಗಿರ್ತಾರೆ'
TV5 Kannada5 Nov 2018 5:41 AM GMT
ಹಾಸನ: ಬದುಕಿರೋವರೆಗೂ ರೇವಣ್ಣ ಶಾಸಕರಾಗಿರ್ತಾರೆ ಅನ್ನೋ ಮೂಲಕ, ಕಾಂಗ್ರೆಸ್ ಸಚಿವೆ ಜಯಮಾಲಾ ಹೆಚ್.ಡಿ.ರೇವಣ್ಣರನ್ನ ಹಾಡಿ ಹೊಗಳಿದ್ದಾರೆ.
ಹಾಸನದ ಶ್ರವಣಬೆಳಗೋಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ರೇವಣ್ಣ ಜನರಿಗೆ ಏನು ಬೇಕೋ ಅರ್ಥ ಮಾಡಿಕೊಂಡು ತಮ್ಮದೇ ಸಾಮ್ರಾಜ್ಯ ಕಟ್ಟಿದ್ದಾರೆ. ಹಾಸನವನ್ನ ನೋಡಿದ್ರೆ, ಇಲ್ಲಿನ ಶುಚಿತ್ವ ನೋಡಿದ್ರೆ ಅವರ ಕೆಲಸ ಅರ್ಥವಾಗತ್ತೆ ಎನ್ನುವ ಮೂಲಕ, ರೇವಣ್ಣ ಎಲ್ಲಾ ಇಲಾಖೆಯಲ್ಲಿ ಮೂಗು ತೂರಿಸುತ್ತಾರೆಂಬ ಕಾಂಗ್ರೆಸ್ ಶಾಸಕ, ಸಚಿವರ ಹೇಳಿಕೆಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಸರ್ಕಾರ ಯಾವುದೇ ಇರಲಿ ತನ್ನವರಿಗಾಗಿ ಅವರು ಬೇಕಾದ ಕೆಲಸವನ್ನು ಮಾಡ್ತಾರೆ. ಜನರನ್ನು ಅರ್ಥಮಾಡಿಕೊಂಡು ಅವರಿಗೆ ಬೇಕಾದುದನ್ನು ಕೊಡೋದು ರೇವಣ್ಣ. ಮಹಿಳೆ ಮಕ್ಕಳ ಬಗ್ಗೆ ಅವರಿಗೆ ವಿಶೇಷ ಅನುಭೂತಿ ಇದೆ ಎನ್ನುವ ಮೂಲಕ ಸಚಿವೆ ಜಯಮಾಲಾ, ಸಹೋದ್ಯೋಗಿ ರೇವಣ್ಣಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
Next Story