ಹೋರಿ ಕಣ್ಣು ಪೋರಿ ಮ್ಯಾಲೆ- ಕನ್ನಡಕ್ಕೆ ರಶ್ಮಿಕಾ ರಿ ಎಂಟ್ರಿ

ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಕನ್ನಡ ಇಂಡಸ್ಟ್ರಿಗೆ ಬರೋದೆ ಡೌಟ್ ಅನ್ನೋ ಮಾತು ಕೇಳಿಬಂದಿತ್ತು. ಆದ್ರೆ ಇದೀಗ ರಶ್ಮಿಕಾ ಪೊಗರು ಚಿತ್ರದಲ್ಲಿ ಧೃವಸರ್ಜಾಗೆ ಜೋಡಿಯಾಗಿ ನಟಿಸಲಿದ್ದಾರೆ.

ಪೊಗರ್ ದಸ್ತ್ ಪೋರನಿಗೆ ರಶ್ಮಿಕಾ ಮೇಲೆ ಕ್ರಶ್​..!?
ಸ್ಯಾಂಡಲ್​ವುಡ್ ಹಾಗೂ ಟಾಲಿವುಡ್​​ನ ಬಾಕ್ಸಾಫೀಸ್ ಪಾತರಗಿತ್ತಿ, ರಶ್ಮಿಕಾ ಮಂದಣ್ಣ, ಸದ್ಯ ಪಕ್ಕದ ಟಾಲಿವುಡ್​​ನಲ್ಲಿ ಬ್ಯಾಕ್ ಟೂ ಬ್ಯಾಕ್ ಸಕ್ಸಸ್ ಕಂಡಿರುವ ಕನ್ನಡತಿ. ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸ್ಟಾರ್ ಸಿನಿಮಾಗಳಿವೆ.

ಇದನ್ನೆಲ್ಲ ನೋಡ್ತಿದ್ರೆ ಸಾನ್ವಿ ಬೆಂಗಳೂರಿನ ಫ್ಲೈಟ್ ಹತ್ತೋದು ಡೌಟ್ ಎನ್ನಲಾಗುತ್ತಿತ್ತು. ಆದ್ರೆ ರಶ್ಮಿಕಾ ಯಜಮಾನ ಚಿತ್ರದ ನಂತರ ಮಗದೊಂದು ನಿರೀಕ್ಷೆಯ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ. ಆ ಚಿತ್ರವೇ ಧ್ರುವ ಸರ್ಜಾ ನಟನೆಯ ನಾಲ್ಕನೇ ಸಿನಿಮಾ ಪೊಗರು.

ಮತ್ತೊಮ್ಮೆ ಸಾನ್ವಿ ಹಾಕುತ್ತಿದ್ದಾರೆ ಕನ್ನಡದಲ್ಲಿ ಕನ್ನಡ್ಕಾ.!!
ನಂದ ಕಿಶೋರ್ ಸಾರಥ್ಯದ ಧ್ರುವ ಸರ್ಜಾರ ಪೊಗರು ಚಿತ್ರದ ಶೂಟಿಂಗ್​​​​ನ ಮೊದಲ ಶೆಡ್ಯುಲ್​ ಮುಗಿಸಿ, 2ನೇ ಶೆಡ್ಯೂಲ್​ಗೆ ಬ್ರೇಕ್​ ನೀಡಿತ್ತು ಚಿತ್ರತಂಡ​. ಈಗ 2ನೇ ಹಂತದ ಶೂಟಿಂಗ್​​ ಇದೇ ತಿಂಗಳ 20ರಿಂದ ಆರಂಭವಾಗಲಿದ್ದು, ರಶ್ಮಿಕಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ವಿಕ್ಟರಿ ಡೈರೆಕ್ಟರ್ ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರವನ್ನು ಬಿ.ಎನ್​​.ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಸಖತ್ ಕಸರತ್ತು ನಡಿಸಿದ್ದಾರೆ ಧ್ರುವ. ಮೀಟೂ ಘಾಟಿನಲ್ಲಿ ಸಿಲುಕಿರುವ ಅರ್ಜುನ್ ಸರ್ಜಾ ಪೊಗರು ಚಿತ್ರದ ಸೆಕೆಂಡ್ ಆಫ್ ಕಥೆಯನ್ನು ಬರೆದ್ದಿದ್ದಾರಂತೆ.

ಈಗಾಗಲೇ ತೆಲುಗಿನಲ್ಲಿ ಹವಾ ಎಬ್ಬಿಸಿರುವ ಕನ್ನಡದ ಚಂದ್ರನ ತುಂಡು ಈಗ ಮತ್ತೆ ಕನ್ನಡ ಬೆಳ್ಳಿತೆರೆಯನ್ನು ಬೆಳಗಲು ಪೊಗರು ಚಿತ್ರತಂಡವನ್ನು ಕೂಡಿಕೊಳಲಿದೆ. ರಶ್ಮಿಕಾ ದೊಡ್ಡ ನಟಿಯಾಗಲಿ. ಎಲ್ಲಾ ಭಾಷೆಯಲ್ಲಿಯೂ ಮಿಂಚಲಿ. ಆದ್ರೆ ಕನ್ನಡವನ್ನು , ಕನ್ನಡ ಚಿತ್ರರಂಗವನ್ನು ಮರೆಯದಿರಲಿ ಎನ್ನುವುದು ಕನ್ನಡ ಪ್ರೇಮಿಯ ಆಶಯ.. ಅಭಿಲಾಷೆ.. ಅಭಿಮಾನ..

ಶ್ರೀಧರ್ ಶಿವಮೊಗ್ಗ_ಎಂಟರ್​​ಟೈನ್ಮೆಂಟ್ ಬ್ಯೂರೋ_ TV5

Recommended For You

Leave a Reply

Your email address will not be published. Required fields are marked *