Top

ದೀಪಾವಳಿ ಹಬ್ಬದ ಪ್ರಯುಕ್ತ- ಸರ್ಕಾರಿ -ಖಾಸಗಿ ಬಸ್ ದರವೂ ಹೆಚ್ಚಳ!

ದೀಪಾವಳಿ ಹಬ್ಬದ ಪ್ರಯುಕ್ತ- ಸರ್ಕಾರಿ -ಖಾಸಗಿ ಬಸ್ ದರವೂ ಹೆಚ್ಚಳ!
X

ಬೆಳಕಿನ ಹಬ್ಬ ದೀಪಾವಳಿಗೆ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಸುಲಿಗೆಗೆ ಇಳಿದಿದ್ದಾರೆ. ಹಬ್ಬಕ್ಕೆ ಜನ ತೆರಳಲು ಸಿದ್ದರಾಗಿದ್ದರೆ, ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಸ್ ಮಾಲೀಕರು ಹೆಚ್ಚಿನ ಪ್ರಯಾಣ ದರ ವಿಧಿಸಿ ದಂಧೆ ಮಾಡುತ್ತಿದ್ದಾರೆ.

ಇನ್ನು ರಾಜ್ಯಗಳ ವಿವಿಧ ನಿಲ್ದಾಣದಿಂದ ಕೆಎಸ್ ಆರ್ ಟಿಸಿ 1500 ಕ್ಕೂ ಹೆಚ್ಚು ವಿಶೇಷ ಬಸ್ಸುಗಳು ಸೇವೆ ನೀಡುತ್ತಿದ್ದು, ದೂರದ ಊರಿಗೆ ತೆರಳುವ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಿದೆ.

ಉದ್ಯೋಗ, ವ್ಯವಹಾರದ ನಿಮಿತ್ತ ನಾನಾ ಭಾಗಗಳಿಂದ ಬೆಂಗಳೂರಿನಲ್ಲಿ ಬಂದು ನೆಲೆಸಿದವರು ದೀಪಾವಳಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳಲು ನಿಂತಿದ್ದಾರೆ. ಆದರೆ ಬಸ್ ಗಳ ಪ್ರಯಾಣ ದರ ದುಪ್ಪಟ್ಟವಾಗಿದ್ದು, ಎರಡು ದಿನ ಇದೇ ದರಗಳು ಮುಂದುವರಿಯಲಿವೆ.

ಸಾಮಾನ್ಯ ದಿನಗಳಲ್ಲಿ 600 ರೂ ಇದ್ದ ಖಾಸಗಿ ಬಸ್ ಟಿಕೆಟ್ ದರ ಈಗ 900 ರಿಂದ 1500 ರೂ ವಿಧಿಸಲಾಗಿದೆ. ಹೀಗಾಗಿ ಹಬ್ಬದ ಅಂಗವಾಗಿ ದೂರದ ಪ್ರಯಾಣ ಮಾಡುವವರಿಗೆ ಆಯಾಸದ ಜೊತೆಗೆ ಸ್ವಲ್ಪ ಆತಂಕವೂ ಜಾಸ್ತಿಯಾಗಲಿದೆ. ನಗರದ ದೂರದ ಊರಿಗೆ ಹೋಗಬೇಕಾದ ಮಂದಿ ಹೆಚ್ಚು ಹಣ ತೆತ್ತು ಪ್ರಯಾಣ ಮಾಡಬೇಕಿದೆ.

ದೀಪಾವಳಿ ಅಂಗವಾಗಿ ಕೆಎಸ್ಆರ್ಟಿಸಿ ಸಹ 1500 ಕ್ಕು ಹೆಚ್ಚುವರಿ ಬಸ್ಸುಗಳನ್ನ ಕಾರ್ಯಾಚರಣೆ ನಡೆಸುತ್ತಿದ್ದು, ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಸೇವೆ ನೀಡಲಿವೆ. ಹಬ್ಬಕ್ಕೆ ಅಂತ ವಿಶೇಷವಾಗಿ ಸೇವೆ ನೀಡುತ್ತಿರುವ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಶೇ .20 ರಿಂದ 25 ರಷ್ಟು ಟಿಕೆಟ್ ದರ ಕೂಡ ಹೆಚ್ಚಳವಾಗಲಿರಲಿದೆ.

ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಸಾಮಾನ್ಯ, ವೇಗದೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ ಕ್ಲಬ್ ಕ್ಲಾಸ್ ಹಾಗೂ ಡೈಮಂಡ್ ಕ್ಲಾಸ್ ಬಸ್ ಸೇವೆಯ ಜೊತೆಗೆ ಹೆಚ್ಚುವರಿಯಾಗಿ ನಿಗಮ ವಿಶೇಷ ಬಸ್ಸುಗಳ ಸೇವೆ ಕಲ್ಪಿಸಲಿವೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಹಾಗೂ ಶಾಂತಿನಗರ ಬಸ್ ನಿಲ್ದಾಣ ಸೇರಿದಂತೆ ವಿವಿಧ ನಿಲ್ದಾಣದಿಂಣದ ಮೈಸೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹೊರನಾಡು, ಮಡಿಕೇರಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಾದ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ಮಧುರೈ ಸೇರಿ ಹಲವೆಡೆ ವಿಶೇಷ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ.

ಹಬ್ಬದ ಸೀಸನ್ ಬಂದಾಗ ಪ್ರತಿ ಭಾರಿ ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳನ್ನ ಬಿಡುತ್ತೆ. ಈ ಭಾರಿ ಸಹ ಬಿಟ್ಟಿದ್ದು, ಖಾಸಗಿ ಬಸ್ ಗಳ ಬೇಡಿಕೆ ಕಡಿಮೆಯಾಗಿಲ್ಲ. ರೈಲಿನ ಸಂಪರ್ಕ ಇರುವ ಊರುಗಳಿಗೆ ಖಾಸಗಿ ಬಸ್ ಸಂಚಾರ ಅಷ್ಟಾಗಿ ಇಲ್ಲ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಮಂದಿ ಈಗಾಗಲೂ ಖಾಸಗಿ ಬಸ್ ಗಳನ್ನ ಆವಲಂಭಿಸಿದ್ದು, ಈ ಕಡೆಗಳಲ್ಲಿ ಖಾಸಗಿ ಬಸ್ ಟ್ರಾವೆಲ್ಸ್ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಹಬ್ಬ ಬಂದರೆ ಸಾಕು ಬಂಡವಾಳ ಮಾಡಿಕೊಳ್ಳಕ್ಕೆ ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ಮುಂದಾಗುತ್ತೇವೆ. ಸರ್ಕಾರ ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿಲ್ಲ. .ಆದರೆ ಹಬ್ಬಕ್ಕೆ ಅಂತ ತೆರಳುವ ಮಂದಿ ಬಳಿ ಹೆಚ್ಚುವರಿ ಟಿಕೆಟ್ ದರ ತೆಗೆದುಕೊಳ್ಳುತ್ತಿರೋದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

Next Story

RELATED STORIES