ಸರ್ಜಾ ವಿಚಾರಣೆಯ ಪಟ್ಟಿಯಲ್ಲಿರುವ ಪ್ರಶ್ನೆಗಳ ಫುಲ್ ಡಿಟೇಲ್ಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿರುವ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮೀ ಟೂ ಪ್ರಕರಣದ ವಿಚಾರಣೆ ನಡೆದಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಅರ್ಜುನ್ ಸರ್ಜಾ ವಿಚಾರಣೆಗೆ ಹಾಜರಾಗಿದ್ದರು.

ಅರ್ಜುನ್ ಸರ್ಜಾ ಜೊತೆ, ಧೃವ ಸರ್ಜಾ ಮತ್ತು ಚಿರು ಸರ್ಜಾ, ಸರ್ಜಾ ಆಪ್ತ ಸಂಬರಗಿ ಕೂಡ ಉಪಸ್ಥಿತರಿದ್ದರು. ಆದರೆ ಅರ್ಜುನ್ ಸರ್ಜಾಗೆ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ವಿಚಾರಣೆಗೊಳಪಡಿಸಲಾಯ್ತು.

ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಆರೋಪಗಳ ಸುರಿಮಳೆಗೈದಿದ್ದು, ಈ ಬಗ್ಗೆ ತನಿಕಾಧಿಕಾರಿಗಳು ಸರ್ಜಾಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಠಾಣೆ ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಮತ್ತು ತನಿಖಾಧಿಕಾರಿ ಎಸ್ಐ ರೇಣುಕಾ ಪ್ರಶ್ನೆಗಳ ತಯಾರಿ ಮಾಡಿದ್ದು. ಸರ್ಜಾಗೆ ಕೇಳಿದ ಪ್ರಶ್ನೆಗಳ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..
1)ವಿಸ್ಮಯ ಚಿತ್ರದಲ್ಲಿ ಕಾಸ್ಟಿಂಗ್ ಸೆಲೆಕ್ಟ್ ಮಾಡಿದ್ದು ಯಾರು?

2)ಶೃತಿ ಹರಿಹರನ್ ಆಯ್ಕೆಯಲ್ಲಿ ನಿಮ್ಮ ಪಾತ್ರವೇನು?

3)ವಿಸ್ಮಯ ಚಿತ್ರದ ಶೂಟಿಂಗ್ನಲ್ಲಿ ನೀವು ಮತ್ತು ಶೃತಿ ಎಷ್ಟು ದಿನ ಒಟ್ಟಾಗಿ ಕೆಲಸ ಮಾಡಿದ್ದೀರಿ?

4)ಶೃತಿ ಹರಿಹರನ್ ಮತ್ತು ನಿಮಗೂ ಎಷ್ಟು ದಿನದ ಪರಿಚಯ?

5)ನಿಮ್ಮ ಅವರ ನಡುವೆ ಮೊಬೈಲ್ ಕಮ್ಯುನಿಕೇಶನ್ ಹೇಗಿದೆ. ಎಷ್ಟು ಬಾರಿ ಅವರೊಂದಿಗೆ ಮೊಬೈಲ್ನಲ್ಲಿ ಮಾತನಾಡಿದ್ದೀರ?

6)ವಾಟ್ಸಾಪ್ ಅಥವಾ ಫೇಸ್ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿದ್ದೀರಾ?

7)ಇನ್ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೃತಿ ಅವರೊಟ್ಟಿಗೆ ಸಂಪರ್ಕದಲ್ಲಿದ್ದೀರಾ?

8)ಎಷ್ಟು ಬಾರಿ ನಿಮ್ಮ ಅವರ ನಡುವೆ ಮೆಸೇಜ್ ಎಕ್ಸ್ಚೇಂಜ್ ಆಗಿದೆ?

9)ಶೃತಿ ಹರಿಹರನ್ ಅವರು ದೂರಿನಲ್ಲಿ ತಿಳಿಸಿರುವಂತೆ ನೀವು ಅವರ ಮೈ ಮುಟ್ಟಿ ಕಿರುಕುಳ ಕೊಟ್ಟ ಆರೋಪಕ್ಕೆ ನಿಮ್ಮ ಸಮಜಾಯಿಷಿ ಏನು?

10)ಇಂಟಿಮೇಟ್ ಸೀನ್ ಚಿತ್ರೀಕರಣದ ಭಾಗವಾಗಲೇಬೇಕಿತ್ತಾ?

11)ಚಿತ್ರ ನಿರ್ದೇಶಕರ ಮೇಲೆ ಇಂಟಿಮೇಟ್ ದೃಶ್ಯಾವಳಿಯ ಸಂಬಂಧ ನಿಮ್ಮ ಪ್ರಭಾವ ಏನು?

12)ವಿಸ್ಮಯ ಚಿತ್ರಕ್ಕೆ ಹಲವು ಕಡೆ ಚಿತ್ರೀಕರಣ ನಡೆಸಲಾಗಿದೆ. ಇದರಲ್ಲಿ ಮೂರು ಜಾಗದಲ್ಲಿ ನೀವು ಶೃತಿ ಅವರಿಗೆ ಕಿರುಕುಳ ಕೊಟ್ಟರೆಂದು ಆರೋಪ ಮಾಡಲಾಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

13)ಹೆಬ್ಬಾಳ ಕೆಂಪಾಪುರದ ಶೂಟಿಂಗ್ ಮನೆಯಲ್ಲಿ ನಡೆದ ಚಿತ್ರೀರಣದಲ್ಲಿ ನಡೆದದ್ದೇನು? ಅಲ್ಲಿಂದಲೇ ನಿಮ್ಮಿಂದ ಕಿರುಕುಳ ಶುರುವಾಯಿತು ಎಂದು ಶೃತಿ ಹರಿಹರನ್ ಆರೋಪಿಸಿದ್ದಾರೆ.

14)ದೇವನಹಳ್ಳಿಯಲ್ಲಿ ಆಸ್ಪತ್ರೆ ಭಾಗದ ಶೂಟಿಂಗ್ ಮುಗಿಸಿ ವಾಪಸ್ಸಾಗಬೇಕಾದ್ರೆ ಸಿಗ್ನಲ್ ಬಳಿ ಶೃತಿ ಕಾರನ್ನು ತಡೆದು ರೆಸಾರ್ಟ್ಗೆ ಬಾ ಎಂದು ಹೇಳಿದ್ದೀರಾ? ಹೇಳಿದ್ದರೆ ಯಾವ ಉದ್ದೇಶಕ್ಕೆ?

15)ಮತ್ತೊಮ್ಮೆ ಯುಬಿ ಸಿಟಿಯಲ್ಲಿ ನಡೆಯುತ್ತಿದ್ದ ಶೂಟಿಂಗ್ ಸಮಯದಲ್ಲಿ ಅವರನ್ನು ರೂಂಗೆ ಬಾ ಎಂದು ಕರೆದಿದ್ದೀರೆಂದು ಆರೋಪಿಸಿದ್ದಾರೆ. ಹೀಗೆ ಕರೆಯುವ ಹಿಂದಿನ ಉದ್ದೇಶವೇನು?

16)ಶೃತಿ ಹಿಂದೆ ಕಾಣದ ಕೈಗಳು ಇದ್ದು ಕೆಲಸ ಮಾಡಿಸುತ್ತಿವೆ ಎಂದು ಹೇಳಿದ್ದೀರಿ. ಇದಕ್ಕೆ ನಿಮ್ಮ ಬಳಿ ಇರುವ ದಾಖಲೆಗಳು ಏನು?

17)ಶೃತಿ ಹರಿಹರನ್ ಅವರ ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿದ್ದಾರೆ, ಮತ್ತು ನಕಲಿ ಖಾತೆಗಳಿಂದ ಪೋಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಗಳು ಏನಿದೆ?

18)ಒಬ್ಬ ಮಹಿಳೆ ಎರಡು-ಮೂರು ವರ್ಷದ ಹಿಂದೆ ನಡೆದ ಘಟನೆಯನ್ನು ಈಗ ಹೇಳಿಕೊಂಡರೆ ಅದರಲ್ಲಿ ತಪ್ಪೇನು?

19)ಶೃತಿ ಹರಿಹರನ್ ಅವರು ದೂರನ್ನು ಕಟ್ಟುಕಥೆ ಎಂದು ಹೇಳಲು ನಿಮ್ಮಲ್ಲಿರವ ದಾಖಲೆ ಏನು?

20)ಶೃತಿ ಹರಿಹರನ್ ಅವರಿಗೆ ನಟ ಚೇತನ ಅವರು ಸಪೋರ್ಟ್ ಮಾಡಿದ್ದರಿಂದ ಹಲವು ಕಥೆಗಳು ಹುಟ್ಟಿಕೊಂಡಿವೆ. ನಿಜಕ್ಕೂ ನಿಮ್ಮ ಮತ್ತು ಚೇತನ್ ಮಧ್ಯೆ ನಡೆದಿದ್ದೇನು?..

ಇವಿಷ್ಟು ವಿಚಾರಣೆ ವೇಳೆ ಸರ್ಜಾಗೆ ಕೇಳಿದ ಪ್ರಶ್ನೆಗಳಾಗಿದ್ದು, ಕಬ್ಬನ್ ಪಾರ್ಕ್ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ಇನ್ನು ವಿಚಾರಣೆ ನಡೆಯುವ ವೇಳೆ ಸ್ಥಳಕ್ಕೆ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಭೇಟಿ ನೀಡಿದ್ದು, ಪ್ರಕರಣ ರಾಜಕೀಯ ತಿರುವು ಪಡೆಯುವ ಸಾಧ್ಯತೆ ಇದೆ.

Recommended For You

Leave a Reply

Your email address will not be published. Required fields are marked *