Top

ದೀಪಾವಳಿಗೂ ಮುನ್ನವೇ ಡೆಲ್ಲಿಯಲ್ಲಿ ಅಪಾಯಮಟ್ಟ ಮುಟ್ಟಿದ ಮಾಲಿನ್ಯ

ದೀಪಾವಳಿಗೂ ಮುನ್ನವೇ ಡೆಲ್ಲಿಯಲ್ಲಿ ಅಪಾಯಮಟ್ಟ ಮುಟ್ಟಿದ ಮಾಲಿನ್ಯ
X

ತೀವ್ರ ಕಳವಳಕ್ಕೆ ಕಾರಣವಾಗಿರುವ ರಾಜಧಾನಿ ದೆಹಲಿಯ ವಾಯುಮಾಲಿನ್ಯ ದೀಪಾವಳಿಗೂ ಮುನ್ನವೇ ಅಪಾಯದ ಮಟ್ಟ ಮೀರಿದೆ. ಇಡೀ ರಾಜಧಾನಿಯಲ್ಲಿ ದಟ್ಟ ಮುಸುಕು ಆವರಿಸಿದೆ.

ಭಾನುವಾರ ರಾತ್ರಿ 10 ಗಂಟೆಗೆ ವಾಯುಮಾಲಿನ್ಯ ಗುಣಮಟ್ಟ ಪರೀಕ್ಷೆಯಲ್ಲಿ 700ರ ಗಡಿ ದಾಟಿತ್ತು. ಮಧ್ಯರಾತ್ರಿ ವೇಳೆ ಅದು 663ರವರೆಗೆ ಇಳಿದಿತ್ತು. ಆದರೆ ಬೆಳಗ್ಗೆ ಮತ್ತೆ 681 ಮತ್ತು 676ರ ಗಡಿಯಲ್ಲಿ ಇತ್ತು.

ದೆಹಲಿಯ ಮಂದಿರ್​ ಮಾರ್ಗ್ ಮತ್ತು ಜವಾಹರಲಾಲ್ ನೆಹರೂ ಕ್ರೀಡಾಂಗಣದ ಬಳಿ ಇಷ್ಟು ದಟ್ಟ ಪ್ರಮಾಣದ ಹೊಗೆ, ಧೂಳು ಆವರಿಸಿಕೊಂಡಿದ್ದು, ಹಲವಾರು ಮಂದಿ ವಾಯುಮಾಲಿನ್ಯದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಸಾಮಾನ್ಯವಾಗಿ ವಾಯುಮಾಲಿನ್ಯದ ಗುಣಮಟ್ಟ 0ಯಿಂದ 50ರವರೆಗೆ ಉತ್ತಮ, 51-100 ಪರ್ವಾಗಿಲ್ಲ. 200ರವರೆಗೆ ಸಾಧಾರಣ, 201-300 ಕಳಪೆ, 400 ತೀರಾ ಕಳಪೆ, 500ರ ಮೇಲ್ಪಟ್ಟರೆ ಆತಂಕಕಾರಿ ಎಂದು ವಿಶ್ಲೇಷಿಸಲಾಗುತ್ತದೆ.

ದಟ್ಟ ಹೊಗೆಯಿಂದಾಗಿ ವಾಹನ ಚಾಲನೆಗೆ ಅಡ್ಡಿಯುಂಟಾಗಿದೆ. ಹಲವಾರು ಮಂದಿ ಗಂಟಲು, ಶ್ವಾಸಕೋಶ ಸೇರಿದಂತೆ ಹಲವು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ದೀಪಾವಳಿಗೆ ಪಟಾಕಿ ಹೊಡೆದರೆ ಈಗಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದ್ದು, ವಾಯುಮಾಲಿನ್ಯ ಸಮಸ್ಯೆ ಅಪಾಯಕಾರಿ ಮಟ್ಟ ಮುಟ್ಟಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Next Story

RELATED STORIES