ಆಕರ್ಷಕವಾಗಿ ಕಾಣಬೇಕೆ? ಇಲ್ಲಿದೆ 10 ಬ್ಯೂಟಿ ಟಿಪ್ಸ್

ಸುಂದರವಾಗಿ ಕಾಣಬೇಕು ಎಂದು ಯಾರು ತಾನೇ ಭಯಸುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಆ ಆಸೆ ಇದ್ದೆ ಇರುತ್ತಾದೆ. ಇಂತಹ ಆಸೆ ಇರುವವರು ಈ ಸ್ಟೋರಿ ನೋಡಿ ಇನ್ನಷ್ಟು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ

ಎಷ್ಟೋ ಜನರು ಮನೆಯಲ್ಲಿಯೇ ಕುಳಿತು ತಮ್ಮ ಸೌಂದರ್ಯ ಕಾಪಡಿಕೊಳ್ಳೂವುದು ಹೇಗೆ ಎಂದು ಯೋಚನೆ ಮಾಡುತ್ತಾರೆ ಆದರೆ ಹೇಗೆ ಸೌಂದರ್ಯ ವೃದ್ದಿಸಿಕೊಳ್ಳುವುದು ಎಂದು ಗೊತ್ತಿರುವುದಿಲ್ಲ, ಅಂತವರು ಮಾಡಬೇಕಾಗಿರುವುದು ಇಷ್ಟೇ ದಿನನಿತ್ಯ ನಾವು ಹೇಳಿರುವ ಕೆಲವೊಂದು ಸಲಹೆಗಳನ್ನು ತಪ್ಪದೆ ಮಾಡಬೇಕು.

  • ಸೌಂದರ್ಯ ವೃದ್ದಿಸಿಕೊಳ್ಳಲು 10 ಸೌಂದರ್ಯ ಸಲಹೆಗಳು

1) ಮೊದಲನೆಯಾದಗಿ ಸ್ವಚ್ಚವಾದ ಬಿಸಿನೀರನ್ನು ಬಳಸಿ ನಿಮ್ಮ ಮುಖವನ್ನು ದಿನದಲ್ಲಿ 3-4 ಭಾರೀ ತೊಳೆಯಿರಿ ಇದರಿಂದ ಮುಖದ ಮೇಲೆ ಬಿದ್ದಿರುವ ಧೂಳು ಜಿಡ್ಡು ಹೋಗುತ್ತಾದೆ. ಈ ರೀತಿ ಮಾಡುವುದರಿಂದ ಮುಖದ ಕಂತಿ ಹೆಚ್ಚುತ್ತಾದೆ ಮತ್ತು ನೀವು ಸುಂದರವಾಗಿ ಕಾಣುತ್ತಿರ.

2) ಮುಖ ತೊಳೆದ ನಂತರ ಹತ್ತಿಯನ್ನು ಬಳಸಿ ಮುಖವನ್ನು ವರೆಸಿಕೊಳ್ಳಿ ಯಾವುದೇ ಕಾರಣಕ್ಕೂ ಒಂದು ಭಾರೀ ಬಳಸಿದ ಟವಲ್​ನ್ನು ಪದೇ ಪದೇ ಬಳಸಬೇಡಿ ಇದರಿಂದ ಬ್ಯಾಕ್ಟರಿಯಗಳು ಮುಖದ ಮೇಲೆ ಬೀಳುತ್ತಾದೆ ಹಾಗಗೀ ಹತ್ತೀ ಬಳಸುವುದು ಸೂಕ್ತ

3)ರಾತ್ರಿ ಬೇಗ ಮಲಗುವುದರಿಂದ ಕಣ್ಣಿಗೆ ತುಂಬಾ ಆರೋಗ್ಯಕಾರ ಅದಷ್ಟು ಬೇಗ ಮಲಗುವುದು ಮತ್ತು ಎದ್ದೇಳುವುದು ತುಂಬಾ ಒಳ್ಳೆಯದು ಈ ರೀತಿ ಮಾಡುವುದರಿಂದ ಕಣ್ಣೀನ ಸುತ್ತಾ ಯಾವುದೇ ಡಾರ್ಕ್​ ಸರ್ಕಲ್ ಹಾಗುವುದಿಲ್ಲ.

4) ನೀವು ಬೆಳಗ್ಗೆ ಬೇಗ ಎದ್ದು  ಜಾಗಿಂಗ್ ಹೋಗುವುದರಿಂದ ನೀವು ಆರೋಗ್ಯಕಾರವಾಗಿರುತ್ತಿರ ಮತ್ತು ದೇಹವು ಉಲ್ಲಸವಾಗಿರುತ್ತಾದೆ.ಮತ್ತು ಮುಖದ ಸೌಂದರ್ಯ ಕೂಡ ವೃದ್ದಿಯಾಗುತ್ತಾದೆ.

5) ರಾತ್ರಿ ಮಲಗುವ ಮುನ್ನಾ ಒಂದು ಲೋಟ ಹಾಲು ಅದಕ್ಕೆ ಒಣಗಿದ ದ್ರಾಕ್ಷಿ.ಗೊಡುಂಬಿ,ಬಾದಮಿಯನ್ನು ಹಾಕಿಕೊಂಡು ಸೇವಿಸುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

6)ಮುಖಕ್ಕೆ ಜೇಣುತುಪ್ಪ ಬಳಸುವುದರಿಂದ ಮುಖದದಲ್ಲಿ ಇರುವ ರಂಧ್ರಗಳು ನಿಧಾನವಾಗಿ ಕಮ್ಮಿಯಾಗುತ್ತಾ ಹೋಗುತ್ತಾದೆ,ಮತ್ತು ಮುಖದಲ್ಲಿ ಮೊಡವೆ ಕಲೆಗಳು ಕೂಡ ಕಡಿಮೆಯಾಗುತ್ತಾದೆ ಮುಖದ ಕಾಂತಿ ಹೆಚ್ಚಾಗುತ್ತಾದೆ.

7) ಹಣ್ಣಾದ ಬಾಳೆಹಣ್ಣುನ್ನು ಕಿವುಚಿ ಅದಕ್ಕೆ ಸ್ವಲ್ಪ ಬಾದಮಿ ಎಣ್ಣೆಯನ್ನು ಹಾಕಿ ನಂತರ ಅದನ್ನು ಮುಖಕ್ಕೆ ಹಾಕಿಕೊಂಡು 20 ನಿಮಿಷ ಬಳಿಕ ತೊಳೆದುಕೊಂಡರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತಾದೆ ಮತ್ತು ಸುಂದರವಾಗಿ ಕಾಣುತ್ತಿರ.

8)ಅರಿಶಿಣ ಮತ್ತು ಪಪ್ಪಾಯಿ ಹಣ್ಣನ್ನು ಚೆನ್ನಾಗಿ ಕಿವುಚಿ ಮುಖಕ್ಕೆ ಹಚ್ಚಿಕೊಂಡು ಕನಿಷ್ಠ ಅರ್ಧಗಂಟೆಯ ನಂತರ ಮುಖ ತೊಳೆದು ನೋಡಿ ಮುಖದ ಕಾಂತಿ ಹೆಚ್ಚುತ್ತಾದೆ.

9) ಶ್ರೀಗಂಧಕ್ಕೆ ಹಸುವಿನ ಹಾಲನ್ನು ಹಾಕಿ ಚೆನ್ನಾಗಿ 2-3 ನಿಮಿಷ ಕಲಸಿ ನಂತರ ಮುಖಕ್ಕೆ ಹಚ್ಚಿಕೊಂಡು 30ರಿಂದ 40 ನಿಮಿಷ ಮುಖದಲ್ಲಿ ಬಿಡಬೇಕು ನಂತರ ಉಗುರು ಬೆಚ್ಚಾನೇಯ ನೀರಿನಲ್ಲಿ ಮುಖವನ್ನು ತೊಳೆಯುವುದರಿಂದ ಮುಖದಲ್ಲಿನ ಕಲೆಗಳು ಮತ್ತು ಜಿಡ್ಡಿನ ಅಂಶ ಕಡಿಮೆಯಾಗುತ್ತದೆ.

10) ಅಕ್ಕಿ ಹಿಟ್ಟನ್ನು ರೋಸ್ ವಾಡರ್ ಬಳಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು ಇದೇ ರೀತಿ ವಾರದಲ್ಲಿ 3ದಿನ ಮಾಡುವುದರಿಂದ ಸುಂದರವಾಗಿ ಕಾಣುತ್ತೀರ ಮತ್ತು ಬೆಳ್ಳಗಗುತ್ತೀರ.

ಈ ಮೇಲಿನ ಈ 10 ಅಂಶಗಳನ್ನು ನೀವು ದಿನನಿತ್ಯ ಪಾಲಿಸುತ್ತಾ ಬಂದರೇ ಮುಖದ ಕಂತಿ ಕಪಾಡಿಕೊಳ್ಳುವುದರ ಜೊತೆಗೆ ಸುಂದರವಾಗಿ ಕಾಣುತ್ತೀರ.

Recommended For You

Leave a Reply

Your email address will not be published. Required fields are marked *