Top

ದೀಪಾವಳಿ ನಂತರ ರಾಮಮಂದಿರ ಕಾಮಗಾರಿ: ಯೋಗಿ ಆದಿತ್ಯನಾಥ್ ಸುಳಿವು

ದೀಪಾವಳಿ ನಂತರ ರಾಮಮಂದಿರ ಕಾಮಗಾರಿ: ಯೋಗಿ ಆದಿತ್ಯನಾಥ್ ಸುಳಿವು
X

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಇದಕ್ಕೆ ದೀಪಾವಳಿಯ ನಂತರ ಶ್ರೀರಾಮನೇ ದಾರಿ ದೀಪ ತೋರಿಸಲಿದ್ದಾನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಮೂಲಕ ರಾಮಮಂದಿರ ನಿರ್ಮಾಣ ಕಾಮಗಾರಿ ದೀಪಾವಳಿಯ ಪ್ರಾರಂಭವಾಗುವ ಸುಳಿವು ನೀಡಿದ್ದಾರೆ.

ರಾಜಸ್ಥಾನ್​ ಬಿಕೇನಾರ್​ನಲ್ಲಿ ಭಾನುವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವ ವೇಳೆ ದೀಪಾವಳಿ ನಂತರ ಮಂದಿರ ನಿರ್ಮಾಣ ಕುರಿತು ರಾಮನೇ ದಾರಿ ದೀಪ ತೋರಲಿದ್ದಾನೆ ಎಂದಿದ್ದಾರೆ.

ಅಯೋಧ್ಯೆಯಲ್ಲಿನ ಭೂವಿವಾದ ಕುರಿತು ವಿಚಾರಣೆ ಸುಪ್ರೀಂಕೋರ್ಟ್ ಮುಂದಿದೆ. ಸುಪ್ರೀಂಕೋರ್ಟ್​ ತುರ್ತು ವಿಚಾರಣೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕಿದ ಬೆನ್ನಲ್ಲೇ ರಾಮಮಂದಿರ ನಿರ್ಮಾಣದ ಬಗ್ಗೆ ಹಿಂದೂ ಸಂಘಟನೆಗಳು ಒತ್ತಡ ಹೇರತೊಡಗಿದವು. ಈ ಹಿನ್ನೆಲೆಯಲ್ಲಿ ಆದಿತ್ಯನಾಥ್ ಅವರ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕೇಂದ್ರ ಸರಕಾರ ರಾಮಮಂದಿರ ಭೂ ವಿವಾದ ಕುರಿತು ಖಾಸಗಿ ಸುಗ್ರಿವಾಜ್ಞೆ ಹೊರಡಿಸಲು ತೆರೆಮರೆಯ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾನಕ್ಕೆ ತೆರೆಮರೆಯ ಕಸರತ್ತು ಆರಂಭವಾಗಿರುವುದು ಸ್ಪಷ್ಟವಾಗಿದೆ.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಕೂಡ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಸ್ವಾಗತಿಸಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನನ್ನ ಕನಸು ಎಂದಿದ್ದಾರೆ.

Next Story

RELATED STORIES