Top

ಸರ್ದಾರ್ ಪಟೇಲ್​ಗಿಂತ ರಾಮನ ಪ್ರತಿಮೆ ದೊಡ್ಡದಿರಲಿ: ಅಜಂಖಾನ್

ಸರ್ದಾರ್ ಪಟೇಲ್​ಗಿಂತ ರಾಮನ ಪ್ರತಿಮೆ ದೊಡ್ಡದಿರಲಿ: ಅಜಂಖಾನ್
X

ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಮನ ಬೃಹತ್ ಪ್ರತಿಮೆಯು ಇತ್ತೀಚೆಗೆ ಉದ್ಘಾಟನೆಗೊಂಡ ಸರ್ದಾರ್ ಪಟೇಲ್ ಅವರ ಪ್ರತಿಮೆಗಿಂತ ದೊಡ್ಡದಾಗಿರಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಸಲಹೆ ನೀಡಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮನ 151 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸುವ ಬಗ್ಗೆ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಎಸ್ ಪಿ ನಾಯಕ ಆಜಂ ಖಾನ್ ಸ್ವಾಗತಿಸಿದ್ದಾರೆ.

ಇತ್ತೀಚೆಗಷ್ಟೇ ಗುಜರಾತ್​ನಲ್ಲಿ ಉದ್ಘಾಟನೆಯಾದ 182 ಮೀಟರ್ ಇರುವ ಸರ್ದಾರ್ ಪಟೇಲ್ ಅವರ ಏಕತೆಯ ವಿಗ್ರಹಕ್ಕಿಂತಲೂ ರಾಮನ ವಿಗ್ರಹ ಎತ್ತರವಿರಬೇಕು ಎಂದು ಹೇಳಿದ್ದಾರೆ. ರಾಮನ ಪ್ರತಿಮೆಯನ್ನು ನಿರ್ಮಿಸುವುದಕ್ಕೆ ಯಾರೂ ವಿರೋಧಿಸುವುದಿಲ್ಲ. ಸರ್ದಾರ್ ಪಟೇಲ್ ಅವರ ಪ್ರತಿಮೆಗಿಂತಲೂ ರಾಮನ ಪ್ರತಿಮೆಯೇ ದೊಡ್ದದಾಗಿರಲಿ ಎಂದು ಆಜಂ ಖಾನ್ ಹೇಳಿದ್ದಾರೆ.

Next Story

RELATED STORIES