ಕೆಜಿಎಫ್ ಸಿನಿಮಾ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

X
TV5 Kannada4 Nov 2018 3:41 PM GMT
ಕನ್ನಡ ಚಿತ್ರರಂಗದ ಭಾರಿ ನಿರೀಕ್ಷೆಯ ,ರಾಕಿಂಗ್ ಸ್ಟಾರ್ ಯಶ್ ನಟನೆ ಕೆಜಿಎಫ್ ಚಿತ್ರದ ಟ್ರೈಲರ್ ಇದೇ ತಿಂಗಳ 8ನೇ ತಾರೀಕ್ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು , ಪೋಸ್ಟ್ ಪ್ರೋಡಕ್ಷನ್ ಕೆಲಸ ಕಾರ್ಯಗಳು ನಡೆಯುತ್ತಿದ್ದು , ಕ್ಲೈಮ್ಯಾಕ್ಸ್ ಭಾಗ ಫೈಟಿಂಗ್ ದೃಶ್ಯವಳಿಗಳನ್ನು ಹೆಚ್ಚುಮಾಡಲು ಚಿತ್ರತಂಡ ಹೊರಟಿದೆ ಎನ್ನಲಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗ್ಯಾಂಗ್ ಸ್ಟರ್ ಅವತಾರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶ್ವದಾದ್ಯಂತ ಏಕಕಾಲಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.
ಬಾಲಿವುಡ್ ಖ್ಯಾತ ವಿತರಕರು ಹಿಂದಿ ರೈಟ್ಸ್ ಖರೀದಿಸಿರೋದು ವಿಶೇಷ. ಇದೇ ಶುಕ್ರವಾರ ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದ್ದು, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಮಾಧ್ಯಮದವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯಲೂ ಹೊರಟಿದೆ ಕೆಜಿಎಫ್ ಸಿನಿಮಾ.
Next Story