Top

ಟಿ-20ಗೆ ವಿಂಡೀಸ್​-ಇಂಡಿಯಾ ಸಜ್ಜು: ಕೃನಾಲ್ ಪಾದರ್ಪಣೆ?

ಟಿ-20ಗೆ ವಿಂಡೀಸ್​-ಇಂಡಿಯಾ ಸಜ್ಜು: ಕೃನಾಲ್ ಪಾದರ್ಪಣೆ?
X

ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಗೆದ್ದು ಬೀಗುತ್ತಿರುವ ಭಾರತ ಮತ್ತು ಹಂತ ಹಂತವಾಗಿ ಸುಧಾರಿತ ಪ್ರದರ್ಶನ ನೀಡುತ್ತಿರುವ ವೆಸ್ಟ್ ಇಂಡೀಸ್ ತಂಡಗಳು ಭಾನುವಾರ ನಡೆಯುವ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ.

ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದ್ದು ಉಭಯ ತಂಡಗಳ ಮೊದಲ ಚುಟುಕು ಕದನಕ್ಕೆ ಈಡನ್ ಗಾರ್ಡನ್ ಅಂಗಳ ಸಜ್ಜಾಗಿದೆ.

ಈಗಾಗಲೇ ವಿಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಸೋದರ ಕೃನಾಲ್ ಪಾಂಡ್ಯ ಈ ಪಂದ್ಯದ ಮೂಲಕ ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ಪಾದರ್ಪಣೆ ಮಾಡುವ ಸಾಧ್ಯತೆ ಇದೆ.

ಇತ್ತ ವೆಸ್ಟ್ ಇಂಡೀಸ್ ಆಡಿದ ಎರಡು ಸರಣಿಗಳಲ್ಲೂ ಸೋಲು ಕಂಡಿದ್ದು ಕೊನೆಯ ಸರಣಿಯನ್ನಾದರೂ ಗೆದ್ದು ತವರಿಗೆ ಮರಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಆಲ್​ರೌಂಡರ್ ಆ್ಯಂಡ್ರೆ ರಸೆಲ್ ಗಾಯಗೊಂಡಿದ್ದು, ಈ ಪಂದ್ಯದಿಂದ ಹೊರಗುಳಿಯಲಿದ್ದು, ತಂಡಕ್ಕೆ ದೊಡ್ಡ ಚಿಂತೆಯಾಗಿದೆ.

ರೋಹಿತ್ ಶರ್ಮಾ ನೇತೃತ್ವದದ ಟೀಂ ಇಂಡಿಯಾದಲ್ಲಿ ಯುವ ಆಟಗಾರರಿಂದ ಕೂಡಿದ ತಂಡವಾಗಿದೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಮತ್ತು ರಿಷಭ್ ಪಂತ್ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಳ್ಳಬೆಕಾಗಿದೆ.

ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಟಾರ್ ಆಟಗಾರರ ಆಗಮನವಾಗಿದೆ. ಕಿರಾನ್ ಪೊಲಾರ್ಡ್, ದಿನೇಶ್ ರಾಮ್ದಿನ್ ಮತ್ತು ಡೆರೆನ್ ಬ್ರಾವೋ ತಂಡಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಈಡನ್ ಅಂಗಳದಲ್ಲಿ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು.

Next Story

RELATED STORIES