Top

ಮೈಸೂರು ಕಾಡಿನಲ್ಲಿ `ಗಜ'ನ ಫೋಟೋ ಬೇಟೆ!

ಮೈಸೂರು ಕಾಡಿನಲ್ಲಿ `ಗಜನ ಫೋಟೋ ಬೇಟೆ!
X

ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ನಟ ದರ್ಶನ್ ಮನೆಯಲ್ಲಿ ಕುಳಿತುಕೊಳ್ಳದೇ ಅದನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವ ಮೂಲಕ ವಿಶ್ರಾಂತಿಯಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಲಗೈಗೆ ಗಾಯವಾಗಿದ್ದರಿಂದ ವಿಶ್ರಾಂತಿಗೆ ಸೂಚಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಈ ಅವಧಿಯನ್ನು ಸಾರ್ಥಕವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದರು.

ಇತ್ತೀಚೆಗೆ ಮೈಸೂರು ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಹೊರಟ ದರ್ಶನ್, ಫೋಟೋಗ್ರಫಿ ಕೂಡ ಮಾಡಿದ್ದಾರೆ. ದರ್ಶನ್ ಫೋಟೋ ಶೂಟ್ ಮಾಡಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ.

ಸಫಾರಿ ವೇಳೆ ದರ್ಶನ್, ಆನೆ, ಕಾಡೆಮ್ಮೆ ಸೇರಿದಂತೆ ಹಲವು ಪ್ರಾಣಿಗಳ ಮನಮೋಹಕ ಫೋಟೋಗಳನ್ನು ಸೆರೆ ಹಿಡಿದಿದ್ದು, ಅವುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗುವುದು. ಇದರಿಂದ ಬಂದ ಹಣ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು.

Next Story

RELATED STORIES