Top

2 ನೇ ಮದುವೆಯಾಗುವಂತೆ ಒತ್ತಾಯಿಸಿ ಥಳಿತ

2 ನೇ ಮದುವೆಯಾಗುವಂತೆ ಒತ್ತಾಯಿಸಿ ಥಳಿತ
X

ಎರಡನೇ ಮದುವೆಗೆ ಒಪ್ಪಿಗೆ ನೀಡದ ಯುವಕನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿರುವ ವಿಡಿಯೋ ಸಮಾಜಿಕ ಜಾಲತಣದಲ್ಲಿ ವೈರಲ್ ಹಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹಲ್ಲೆಗೆ ಒಳಗಾಗಿದ್ದ ಯುವಕ ಕೆ,ಆರ್ ಮೊಹಲ್ಲಾ ನಿವಾಸಿ ಗೌಸ್ ಪೀರ್ ಪೊಲೀಸರಿಗೆ ದೂರು ನೀಡಿದ್ದು,ಪೊಲೀಸರ ಮುಂದೆ ಘಟನೆ ಸಂಭಂದ ಸಂಪೂರ್ಣ ವಿವರಣೆಯನ್ನು ನೀಡಿದ್ದನೆ.

ನಾನು ಮದುವೆ ಆಗಿದ್ದರೂ ಮತ್ತೆ ಎರಡನೇ ವಿವಾಹವಾಗು ಎಂದು ಮೈಸೂರು ಮೂಲದ ರೇಷ್ಮಾ ಹಠಕ್ಕೆ ಬಿದ್ದಿದ್ದು, ನಾನು ಒಪ್ಪಿಕೊಳ್ಳದಿದ್ದಾಗ. ಯುವತಿಯ ಮಾವಂದಿರು ನನ್ನನ್ನು ಕಿಡ್ಯ್ನಾಪ್ ಮಾಡಿದರು. ಮದುವೆಗೆ ಒಪ್ಪುವಂತೆ ಚಿತ್ರಹಿಂಸೆ ನೀಡಿದರು. ಅದರೆ ಮೊದಲೆ ಮದುವೆಯಾಗಿದ್ದ ಕಾರಣ ನಾನು ಪ್ರೀತಿಯನ್ನು ನಿರಾಕರಿಸಿದೆ.ಹೀಗಾಗಿ ಗಂಧದ ಮರ ಕಡಿಯಲು ಬಂದಿರೋದಾಗಿ ಒಪ್ಪಿಕೊಳ್ಳುವಂತೆ ರೇಷ್ಮಾ ಮಾವಂದಿರರಿಂದ ದೇಹದ ಮೇಲೆಲ್ಲಾ ಮಾರಣಾಂತಿಕ ಹಲ್ಲೆ ನಡೆಸಿದರು.ಚಿತ್ರಹಿಂಸೆ ತಳಲಾರದೆ ನಾನು ಒಪ್ಪಿಕೊಂಡೆ ಎಂದು ಗೌಸ್ ಪೀರ್ ಪೊಲೀಸರ ಬಳಿ ಹೇಳಿದರು.

ತೋಟದ ಮನೆಯಲ್ಲಿ ಮರಕ್ಕೆ ಕಟ್ಟಿ ಹಾಕಿ ಅರೆಬೆತ್ತಲೆ ಮಾಡಿ ಚಿತ್ರಹಿಂಸೆ ಮಾಡಿದರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಇದೀಗ ಬ್ಲಾಕ್ ಮೇಲ್ ಮಾಡುತ್ತಿದ್ದರೆ, ಅವರ ಹಿಂಸೆ ಸಹಿಸಿಕೊಳ್ಳಲಾಗದೆ ನಾನು ಕಳ್ಳತನ ಮಾಡಲೂ ಬಂದಿರುವುದಾಗಿ ಒಪ್ಪಿಕೊಂಡೆ. ಇದೀಗ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಗಂಡ ಹೆಂಡತಿ ಇಬ್ಬರ ಜೀವ ತೆಗೆಯೋ ಬೆದರಿಕೆ ಹಾಕಲಾಗಿತ್ತು ಹಾಗಗೀ ದೂರು ನೀಡಲಿಲ್ಲ ಎಂದರು.

ಸಲೀಂ, ಇಮ್ರಾನ್, ಮುಬಾರಕ್, ಸಾಬು ಎಂಬುವವರ ವಿರುದ್ಧ ಆರೋಪ ಕೇಳಿಬಂದಿದ್ದು. ಸದ್ಯ ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತರಿಗೆ ಗಾಯಾಳು ಗೌಸ್ ಪೀರ್ ವಿಚಾರ ತಿಳಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Next Story

RELATED STORIES