Top

ಕಿಂಗ್ ಖಾನ್​ಗೆ ಫ್ಯಾನ್ಸ್​ಗೆ ಝೀರೋ ಟ್ರೈಲರ್ ಧಮಾಕ.!

ಕಿಂಗ್ ಖಾನ್​ಗೆ ಫ್ಯಾನ್ಸ್​ಗೆ ಝೀರೋ ಟ್ರೈಲರ್ ಧಮಾಕ.!
X

ಶಾರೂಕ್ ಖಾನ್​ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಇದಕ್ಕೆ ಕಾರಣ ಶಾರೂಕ್ ಗೆ ಇಂದು ಹುಟ್ಟುಹಬ್ಬದಕ್ಕೆ ಫ್ಯಾನ್ಸ್ ನೀಡಿದ ಗಿಷ್ಟ್. ಶಾರೂಕ್ ಅಭಿನಯದ ಝೀರೋ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಯುಟ್ಯೂಬ್​ನಲ್ಲಿ ಸದ್ದು ಮಾಡುತ್ತೀದೆ.

ಬಾಲಿವುಡ್​​ ಬಾದ್​ ಶಾ. ಕೋಟ್ಯಾಂತರ ಅಭಿಮಾನಿಗಳ ರೋಮ್ಯಾಂಟಿಕ್ ಹೀರೋ, ಶಾರೂಕ್ ಖಾನ್ 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ..ಅಭಿಮಾನಿಗಳು ಕಿಂಗ್ ಖಾನ್ ಬರ್ತ್​ ಡೇ ಸೆಲೆಬ್ರೇಷನ್​ನಲ್ಲಿ ಮುಳುಗಿಸಿದರೆ. ಇತ್ತ ತಮ್ಮ ಡೈ ಹಾರ್ಡ್​ ಫ್ಯಾನ್ಸ್​ಗೆ ಜೀರೋ ಚಿತ್ರದ ಟ್ರೇಲರ್​ನ್ನ ಗಿಫ್ಟ್ ಆಗಿ ನೀಡಿದ್ದಾರೆ.

ಝೀರೋ ಚಿತ್ರದ ಟ್ರೈಲರ್ ರಿಲೀಸ್ ಆಗ್ತಿದ್ದಂತೆ ಯೂಟ್ಯೂಬ್​​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು ಲೈಕ್ಸ್​, ಶೇರ್​ಗಳ ಸುರಿಮಳೆಯಾಗಿದೆ. ಕಿಂಗ್ ಖಾನ್ ಆಕ್ಟಿಂಗ್ ಹಾಗು ಟ್ರೈಲರ್​​ಗೆ ಫಿಧಾ ಆ ಗಿರೋ ಫ್ಯಾನ್ಸ್ ಬಿಟ್ಟು ಬಿಡದ ಹಾಗೆ ಟ್ರೈಲರ್​ನ ಕಣ್ತುಂಬಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮಂದಿ ಕೂಡ ಝೀರೋ ಟ್ರೈಲರ್ ನೋಡಿ ಮೂಖ ವಿಸ್ಮಿತರಾಗಿದ್ದಾರೆ.

ಬಾಲಿವುಡ್ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಕುಬ್ಜನ ಪಾತ್ರದಲ್ಲಿ ಶಾರೂಕ್ ನಟಿಸಿದ್ದಾರೆ. ಅನುಷ್ಕಾ ಶರ್ಮ, ಕತ್ರಿನಾ ಕೈಫ್ ಶಾರೂಕ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಿ ಟೌನ್​ನ ಹಿಟ್ ಡೈರೆಕ್ಟರ್ ಆನಂದ್ ಎಲ್ ರೈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

Next Story

RELATED STORIES