Top

13 ಜನರ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಹುಲಿಯ ಹತ್ಯೆ..!

13 ಜನರ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಹುಲಿಯ ಹತ್ಯೆ..!
X

ಮಹಾರಾಷ್ಟ್ರ: 13 ಜನರ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಹುಲಿ ಅವನಿಯನ್ನು ಮಹಾರಾಷ್ಟ್ರದಲ್ಲಿ ಹತ್ಯೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅವನಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.

2012ರಲ್ಲಿ ಅವನಿ ಮೊದಲ ಬಾರಿಗೆ ಮಹಾರಾಷ್ಟ್ರದ ಯವತ್ಮಲ್ ಕಾಡಿನಲ್ಲಿ ಕಾಣಿಸಿಕೊಂಡಿತು. ಕಳೆದ ಐದು ವರ್ಷಗಳಿಂದ ಈ ಕಾಡಿನಲ್ಲಿ 13 ಜನ ಸಾವನ್ನಪ್ಪಿದ್ದು, ಡಿಎನ್‌ಎ ಟೆಸ್ಟ್ ಮಾಡಿದಾಗ ಈ ಸಾವಿಗೆ ಕಾರಣ ಅವನಿ ಎಂಬ ಸುಳಿವು ಸಿಕ್ಕಿತ್ತು.

ಸುಪ್ರೀಂ ಸೂಚನೆ ಸಿಕ್ಕಾಗಿಂದ ಅರಣ್ಯಾಧಿಕಾರಿಗಳು, ಶಾರ್ಪ್‌ ಶೂಟರ್ಸ್‌, ಡ್ರೋನ್ ಕ್ಯಾಮೆರಾ,ಟ್ರ್ಯಾಪ್ ಕ್ಯಾಮೆರಾ, ಪೊಲೀಸ್ ನಾಯಿ ಮತ್ತು ಆನೆಗಳ ಸಹಾಯದಿಂದ ಅವನಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರು.

ನಿನ್ನೆ ಅವನಿಯ ಸುಳಿವು ಸಿಕ್ಕಿದ್ದು, ಅವನಿಯನ್ನು ಶಾರ್ಪ್ ಶೂಟರ್‌ಗಳು ಸ್ಥಳದಲ್ಲೇ ಗುಂಡಿಕ್ಕಿ ಸಾಯಿಸಿದ್ದಾರೆ.

Next Story

RELATED STORIES