Top

ಪತ್ನಿಗೆ ಶುಭಕೋರಿದ ಮಹಾರಾಜ ಯದುವೀರ್ ಒಡೆಯರ್

ಪತ್ನಿಗೆ ಶುಭಕೋರಿದ ಮಹಾರಾಜ ಯದುವೀರ್ ಒಡೆಯರ್
X

ಮೈಸೂರು: ಮೈಸೂರು ಮಹಾರಾಜ ಯದುವೀರ್ ಒಡೆಯರ್ ತಮ್ಮ ಪತ್ನಿಗೆ ವರ್ಧಂತಿಯ ಶುಭಾಶಯ ಕೋರಿದ್ದಾರೆ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪತ್ನಿ ಮತ್ತು ಮಗುವಿನ ಫೋಟೋ ಪೋಸ್ಟ್ ಮಾಡಿದ್ದಾರೆ.

ಅರ್ಜುನ ಆನೆಯ ಮುಂದೆ ತ್ರಿಷಿಕಾ ಮತ್ತು ಆದ್ಯವೀರ್ ಸಂತೋಷದಿಂದ ಇರುವ ಫೋಟೋವನ್ನ ಅಪ್ಲೋಡ್ ಮಾಡಿರುವ ಯದುವೀರ್, ವರ್ಧಂತಿಯ ಶುಭಾಶಯ ತಿಳಿಸಿದ್ದಾರೆ.

ನನ್ನ ಧರ್ಮಪತ್ನಿಯಾದ, ಸನ್ನಿಧಾನ ಸವಾರಿಯವರು ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ವರ್ಧಂತಿಯಂದು ಶುಭ ಕೋರುತ್ತೇನೆ. ಜಗನ್ಮಾತೆ ಶ್ರೀಚಾಮುಂಡೇಶ್ವರಿ ದೇವಿ ಅವರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭಕೋರಿದ್ದಾರೆ.

Next Story

RELATED STORIES