ಅಧಿಕಾರಿಗಳಿಗೆ ತರಾಟೆ: ತಕ್ಷಣ ಕಾಮಗಾರಿ ಪೂರ್ಣ ಮಾಡಲು ಆದೇಶ

ನಮ್ಮಲ್ಲಿನ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಆದರೆ ಇಲ್ಲಿನ ಕೆರೆ ವಾಸನೆಯಿಂದ ಪಾಠ ಕೆಳೋಕೆ , ಓದೋಕೆ ಆಗ್ತಿಲ್ಲ. ಅಲ್ಲದೆ ನಮ್ಮ ಆರೋಗ್ಯ ಹಾಳಾಗ್ತಿದೆ. ಮೊಡವೆಗಳು,ಹುಣ್ಣುಗಳು ಆಗುತ್ತಿವೆ. ಪರಿಣಾಮ ನಾವೆಲ್ಲಾ ಏಕಾಗ್ರತೆಯೇ ಕಳೆದು ಕೊಂಡಿದ್ದೇವೆ.ಎಂದು ಹೊಸಕೇರಹಳ್ಳಿಯ ಶಾರದ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿನಿ ರುಚಿತ .ಬಾಲಕಿ ಮೇಯರ್ ಗಂಗಾಬಿಂಕೆಗೆ ಮನವಿ ಮಾಡಿಕೊಂಡರು.
ಅಲ್ಲಿ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಅದು ಮುಗಿಯುವ ಲಕ್ಷಣವೇ ಇಲ್ಲಾ. ಇನ್ನೂ ಆ ಪ್ರದೇಶದಲ್ಲಿ ಉಳಿಯುವಂತೂ ಇಲ್ಲ. ಜನರ ಕೂಗು ಆಲಿಸದ ಪಾಲಿಕೆಗೆ ಇಂದು ವಿದ್ಯಾರ್ಥಿನಿಯ ಧ್ವನಿ ಆಲಿಸುವಂತಾಯ್ತು. ಇಷ್ಟಕ್ಕೂ ಪಾಪ ಇವರ ಕಷ್ಟ ಯಾರಿಗೆ ಹೇಳೊಣ..? ಎನ್ನುವ ಸ್ಥಿತಿ ಬಂದು ಬಿಟ್ಟಿದೆ.
ಇಂಥ ಆರೋಪ ಮಕ್ಕಳಿಂದ ಮಾತ್ರವಲ್ಲ. ಈ ಭಾಗದ ಜನರಿಂದ ಆಗಾಗ ಕೇಳಿ ಬರ್ತಾನೇ ಇತ್ತು. ಇಲ್ಲಿ ಮಳೆ ಬಂತು ಅಂದರೆ ಈ ಪ್ರದೇಶ ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಸ್ಯಾನಿಟರಿ ನೀರು ರಸ್ತೆಗೆ ಬರುತ್ತೆ. ಗಬ್ಬು ವಾಸನೆ ತಡೆಯೋಕೆ ಆಗ್ತಿಲ್ಲ. ನಾವು ಇಲ್ಲಿ ಬದುಕೋದು ಹೇಗೆ.? ಇದು ಕಳೆದ ಮೂರು ವರ್ಷಗಳಿಂದ ನಡಿತಾನೇ ಇದೆ. ಕೆರೆ ತಾಜ್ಯ ನಿರ್ವಹಣೆಯಲ್ಲಿ ಗುತ್ತಿಗೆದಾರರು ತಲೆಕೇಡಿಸಿಕೊಳ್ಳುತ್ತಿಲ್ಲ.
ಇದೇ ಕಾರಣಕ್ಕೆ ಮೇಯರ್ ಗಂಗಾಬಿಕೆ ಅವರು ಇಂದು ಹೊಸಕೆರೆಹಳ್ಳಿ ಕೆರೆ ಪರಿಶೀಲನಗೆ ತೆರಳಿದರು. ತಮ್ಮ ಜೋತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆಸಿಕೊಂಡರು. ಸ್ಥಳವನ್ನು ಪರಿಶೀಲಿಸಿ ಪಾಲಿಕೆಯ ಸ್ಪೆಷಲ್ ಕಮಿಷನರ್ ಗೆ ಹಾಗೂ ಸಂಬಂಧ ಪಟ್ಟವರಿಗೆ ತರಾಟೆಗೆ ತೆಗೆದುಕೊಂಡರು ಮೇಯರ್ ಅಷ್ಟಕ್ಕೂ ಅಧಿಕಾರಿಗಳು ಮೇಯರ್ ಗೆ ಜಮಜಾಯಿಸಿ ನೀಡಿದರು.
ಅದೇನ ಮಾಡ್ತಿರೋ ಜನರಿಗೆ ಯಾವುದೇ ತೊಂದರೆ ಆಗಬಾರದು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೊಸಕೆರೆಹಳ್ಳಿಯ ಪ್ರದೇಶದ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದು ಮೇಯರ್ ಹೇಳಿದ್ದು.ಆದರೆ ಅಧಿಕಾರಿಗಳಿಗೆ ಇದು ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎನ್ನುವುದೇ ಪ್ರಶ್ನೆಯಾಗಿದೆ.