Top

ಚಿಕಿತ್ಸೆ ಫಲಿಸದೇ ಮಾಜಿ ಶಾಸಕ ರವೀಂದ್ರ ನಿಧನ

ಚಿಕಿತ್ಸೆ ಫಲಿಸದೇ ಮಾಜಿ ಶಾಸಕ ರವೀಂದ್ರ ನಿಧನ
X

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ರವೀಂದ್ರ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದ ರವೀಂದ್ರ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ದಾವಣಗೆರೆ ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ರು.

ಕೆಲ ದಿನಗಳ ಹಿಂದಿನಿಂದಲೇ ರವೀಂದ್ರ ಆರೋಗ್ಯ ಹದಗೆಟ್ಟಿದ್ದು, ಈ ಹಿನ್ನೆಲೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಮುಂಜಾನೆ 3.30ರ ಸುಮಾರಿಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇನ್ನು ಪಾರ್ಥಿವ ಶರೀರದ ಅಂತಿಮ ದರ್ಶನ ಬೆಂಗಳೂರಿನ ಗಾಂಧಿಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, 9 ಗಂಟೆಯಿಂದ 11 ಗಂಟೆಯವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

11 ನಂತರ ಪಾರ್ಥೀವ ಶರೀರವನ್ನು ಹರಪ್ಪನಹಳ್ಳಿಗೆ ಕೊಂಡೊಯ್ಯಲಿದ್ದು, 11 ಗಂಟೆಯಿಂದ ಸಂಜೆ 06 ಗಂಟೆವರೆಗೂ ಹರಪನಹಳ್ಳಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಂಜೆ ಬಳಿಕ ರವೀಂದ್ರ ಕುಟುಂಬಸ್ಥರು ಪಾರ್ಥೀವ ಶರೀರವನ್ನು ಹೂವಿನ ಹಡಗಲಿಗೆ ಕೊಂಡೊಯ್ಯಲಿದ್ದು, ನಾಳೆ ಹೂವಿನ ಹಡಗಲಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

Next Story

RELATED STORIES