Top

ಮಾಜಿ ಸಿಎಂ ಬೆನ್ನು ಬಿಡದ ಹೂಬ್ಲೋಟ್​ ವಾಚ್​ ಪ್ರಕರಣ...!

ಮಾಜಿ ಸಿಎಂ ಬೆನ್ನು ಬಿಡದ ಹೂಬ್ಲೋಟ್​ ವಾಚ್​ ಪ್ರಕರಣ...!
X

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗಿಪ್ಟ್​ ಪಡೆದಿದ್ದ ದುಬಾರಿ ಹೂಬ್ಲೋಟ್ ವಾಚ್​ ಪ್ರಕರಣದ ತನಿಖೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಡಾ.ಗಿರೀಶ್​ ಚಂದ್ರ ವರ್ಮಾ ನಕಲಿ ಬಿಲ್​ ನೀಡಿದ್ದಾರೆ ಎಂದು ದೂರುದಾರ ನಟರಾಜ್​ ಶರ್ಮಾ ಆರೋಪಿಸಿದ್ದಾರೆ.

ವಾಚ್​ ಗಿಪ್ಟ್​ ಪಡೆದಿದ್ದ ಹಿನ್ನಲೆಯಲ್ಲಿ ಸದನದಲ್ಲಿ ಪತ್ರಿಪಕ್ಷಗಳು ಉಭಯ ಸದನಗಳಲ್ಲಿ ಹೋರಾಟ ನಡೆಸಿ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮಗೆ ಒತ್ತಾಯಿಸಿದ್ರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ವಾಚ್​ಅನ್ನು ವಿಧಾನಸೌಧದಲ್ಲೇ ಬಿಟ್ಟಿದ್ದರು.

ಆದ್ರೆ ಪ್ರತಿಪಕ್ಷಗಳ ಹೋರಾಟಕ್ಕೆ ಎಚ್ಚೆತ ಸಿದ್ದು ದುಬೈ ನಲ್ಲಿರುವ ವೈದ್ಯ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ಗಿಪ್ಟ್​ ನೀಡಿದ್ದಾಗಿಯೂ. ಜತೆಗೆ ಸಂಬಂಧಿಸಿದ ದಾಖಲೆಗಳಿವೆ ಎಂದು ಬಿಲ್​ಗಳನ್ನು ಸದನದಲ್ಲಿ ತೋರಿಸಿ ಪ್ರಕರಣಕ್ಕೆ ತಿಲಾಜಂಲಿ ಇಟ್ಟಿದ್ದರು. ಈಗ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್​ ಸಿಕ್ಕು, ವಾಚ್​ ಖರೀದಿಸಿರುವುದು 2015ರ ಏಪ್ರಿಲ್​ 12 ರಂದು. 2016 ರ ಏಪ್ರಿಲ್​ನಲ್ಲಿ ಸಿದ್ದು ವಿರುದ್ಧ ಎಸಿಬಿಯಲ್ಲಿ ವಕೀಲ ನಟರಾಜ್​ ಶರ್ಮಾ ದೂರು ನೀಡಿರುವುದು. ಆದ್ರೆ ಡಾ.ಗಿರೀಶ್​ ಚಂದ್ರ ಕಸ್ಟಮ್ಸ್ ಡ್ಯೂಟಿ ಕಟ್ಟಿರುವುದು 2016 ಮೇ 2ರಂದು. ದೂರು ದಾಖಲಾದ ಒಂದು ತಿಂಗಳ ನಂತರ ಗಿರೀಶ್ ಚಂದ್ರ ವರ್ಮಾ ಕಸ್ಟಮ್ಸ್ ಡ್ಯೂಟಿ ಪಾವತಿಸಿದ್ದಾರೆ.

ಅಲ್ಲದೇ ಎಸಿಬಿಗೆ ನೀಡಿರುವ ಇನ್ ವಾಯ್ಸ್ ನಂಬರ್ ಬೇರೆ ಹೆಸರಿನಲ್ಲಿದೆ. ಅಲ್ದೆ ಬಿಲ್ ನ ಎಡಿಟ್ ಮಾಡಿ ಎಸಿಬಿಗೆ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ರು. ಡಾ. ಗಿರೀಶ್ ಚಂದ್ರ ವರ್ಮಾ ನೀಡಿರುವ ದಾಖಲೆ ದುಬೈ ಖಥಾನ್ ಜ್ಯುವೆಲರಿಯಿಂದ ಬಿಲ್ ಅಸಲಿತನವನ್ನು ಎಸಿಬಿ ತನಿಖೆ ನಡೆಸಿಲ್ಲ. ಅಲ್ದೆ ಆರೋಪಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಹಾಗೂ ಗಿಫ್ಟ್ ಕೊಟ್ಟಿರುವ ಡಾ.ಗಿರೀಶ್​ ಚಂದ್ರ ಹೇಳಿಕೆಗಳನ್ನು ಎಸಿಬಿ ಪಡೆದಿಲ್ಲ. ಪ್ರಕರಣವನ್ನು ಹಳ್ಳ ಹಿಡಿಸುವ ಹುನ್ನಾರ ಎಸಿಬಿಯಿಂದ ನಡೆದಿದ್ಯಾ ಎಂಬ ಆರೋಪಗಳು ಬಂದಿವೆ.

ಈ ಮೂಲಕ ಕಳೆದ ಒಂದು ವರ್ಷದಿಂದ ತಣ್ಣಗಿದ್ದ ಕೇಸ್​ಗೆ ಮರು ಜೀವ ಬಂದಿದೆ. ಸಮ್ಮಿಶ್ರ ಸರ್ಕಾರದಲ್ಲಿ ಪದೆ ಪದೆ ಸಿಎಂ ಎಚ್​ಡಿಕೆ ಟಾಂಗ್​ ನೀಡುತ್ತಿರುವ ಮಾಜಿ ಸಿಎಂ ಸಿದ್ದು ಕಟ್ಟಿಹಾಕಲು ಎಚ್​ಡಿಕೆಗೆ ಇದೇ ಅಸ್ರ್ತವಾಗುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.

Next Story

RELATED STORIES