Top

ನಟ ದರ್ಶನ್​ ಕಾರು ಅಪಘಾತದ ಸಂಪೂರ್ಣ ಮಾಹಿತಿ

ನಟ ದರ್ಶನ್​ ಕಾರು ಅಪಘಾತದ ಸಂಪೂರ್ಣ ಮಾಹಿತಿ
X

ನಟ ದರ್ಶನ್‌ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಪ್ರಕರಣದ ಮಾಹಿತಿ ಕಲೆ ಹಾಕಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿರುವ ಪೊಲೀಸರು ತಪ್ಪಿತಸ್ಥರ ವಿರುದ್ದ ಸೂಕ್ತಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೆ.

2018ರ ಅಕ್ಟೋಬರ್ 29ರಂದು ಮೈಸೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದರು, 360 ಡಿಗ್ರಿ ಆಗ್ಯಂಲ್‌ನಲ್ಲಿ ವಿ ವಿ ಪುರಂ ಪೊಲೀಸರಿಂದ ತನಿಖೆ ನಡೆಸಲಾಗಿದೆ. ಅಪಘಾತದ ದಿನ ನಾಲ್ಕು ಜನ ಇದ್ದರು ಆದರೆ ಪೊಲೀಸರ ತನಿಖೆಯಿಂದ ಇದೀಗ ಐವರೆಂದು ಹೇಳಲಾಗುತ್ತೀದೆ. ಇನ್ನೂ ಅಪಘಾತದ ವೇಳೆ ನಾಲ್ವರು ಮಾತ್ರ ಎಂದು ಎಫ್ ಐ ಆರ್ ಆಗಿದ್ದು, ಇದೀಗಾ ಕಾರಿನಲ್ಲಿರುವವರು ಐದು ಜನರು, ಚಿಕಿತ್ಸೆ ಪಡೆದವರು 6 ಮಂದಿ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್.23ರಂದು ದರ್ಶನ್‌ ಕಾರು ಅಪಘಾತಕ್ಕಿಡಾಗಿದೆ.ಆ ಕಾರನ್ನು ಅವರ ಗೆಳೆಯ ಆಂಟೋನಿ ರಾಯ್‌ ಚಾಲನೆ ಮಾಡುತ್ತಿದ್ದರು. ರಿಂಗ್‌ರಸ್ತೆಯ ಜಂಕ್ಷನ್‌ ಬಳಿ ಆಂಟೋನಿಯವರ ನಿರ್ಲಕ್ಷ್ಯತನದಿಂದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ನಂತರ ಕಾರಿನಲ್ಲಿದ್ದ 5 ಮಂದಿಗೆ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಮಯದಲ್ಲಿ ದರ್ಶನ್‌ರಿಗೆ ಸಹಾಯ ಮಾಡಲು ಬಂದ ವ್ಯಕ್ತಿಯೋಬ್ಬರು ಆಯತಪ್ಪಿ ಬಿದ್ದು ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿದೆ. ಇನ್ನೂ ಗಾಯಕೊಂಡ ವ್ಯಕ್ತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಾರನ್ನು ಸರ್ಕಾರಿ ಆರ್‌ಟಿಓ ಅಧಿಕಾರಿಗಳು ಪರಿಶೀಲಿಸಿದ್ದು, ಯಾವುದೇ ತಾಂತ್ರಿಕ ಕಾರಣದಿಂದ ಅಪಘಾತ ಆಗಿಲ್ಲ ಎಂದು ವರದಿ ನೀಡಿದ್ದಾರೆ. ಘಟನೆ ಸಂಬಂಧ ನಟರಾದ ದರ್ಶನ್‌, ಹಿರಿಯ ನಟ ದೇವರಾಜ್‌, ನಟ ಪ್ರಜ್ವಲ್‌ ದೇವರಾಜ್‌, ಚಾಲಕ ಆಂಟೋನಿ, ಕಾರಿನಲ್ಲಿದ್ದ ಪ್ರಕಾಶ್‌ ಎಂಬುವವರ ಹೇಳಿಕೆ ಪಡೆಯಲಾಗಿದೆ.

ಎಲ್ಲರ ಹೇಳಿಕೆಯಲ್ಲು ಆಂಟೋನಿಯವರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸಹಜ ಅಭಿಪ್ರಾಯ ಬಂದಿದೆ. ತಪ್ಪಿತಸ್ಥ ಚಾಲಕ ಆಂಟೋನಿ ರಾಯ್‌ ವಿರುದ್ದ ಕಾನೂನಿ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಲಾಗಿದೆ.

Next Story

RELATED STORIES