Top

ದೇವೇಗೌಡರ ಶಿಷ್ಯರು ನಾವೆಲ್ಲ: ಸಚಿವ ಪುಟ್ಟರಾಜು

ದೇವೇಗೌಡರ ಶಿಷ್ಯರು ನಾವೆಲ್ಲ: ಸಚಿವ ಪುಟ್ಟರಾಜು
X

ಮಾಜಿ ಪ್ರಧಾನಿ ದೇವೇಗೌಡರು ಅಪಾರ ದೈವ ಭಕ್ತಿ ಇರುವರು. ಅವರ ಶಿಶ್ಯರು ನಾವೆಲ್ಲ, ಅದಕ್ಕಾಗಿ ತಾಯಿ ಹಾಸನಾಂಬೆ ದರ್ಶನ ಪಡೆಯಲು ಕುಟುಂಬ ಸಮೇತ ಬಂದಿದ್ದೇವೆ ಎಂದು ಸಚಿವ ಪುಟ್ಟರಾಜು ಹೇಳಿದರು.

ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ಪ್ರತಿವರ್ಷವೂ ಹಾಸನಾಂಬೆ ದರ್ಶನವನ್ನು ನಾನು ಪಡೆಯುತಿದ್ದೇನೆ, ಈ ಭಾರಿ ಸಚಿವನಾಗಿ ತಾಯಿ ದರ್ಶನ ಪಡೆದದ್ದು ಸಂತಸವಾಗಿದೆ ಎಂದರು.

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ಶಿವರಾಮೇಗೌಡ ಅತ್ಯಂತ ಹೆಚ್ಚು ಬಹುಮತದಿಂದ ಗೆಲುವು ಸಾಧಿಸುತ್ತಾರೆ. ರೈತ ಸಂಘದ ನಿಜವಾದ ಕಾರ್ಯಕರ್ತರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವ ಭರವಸೆ ಇದೆ ಎಂದು ಹೇಳಿದರು.

5 ಕ್ಷೇತ್ರಗಳಲ್ಲೂ ಜೆಡಿಎಸ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ, 6ನೇ ತಾರೀಕು ಸರ್ಕಾರ ಬೀಳುತ್ತೆ ಎನ್ನುವ ಬಿಜೆಪಿ ಹೇಳಿಕೆಗೆ ಇಂತಹ ಗಡುವುಗಳು ಹಲವಾರು ಮುಗಿದಿವೆ. ಅವರ ಭ್ರಮೆ ಅಷ್ಟೆ . ಮತದಾರರು ಬಹಳ ಬಿಗುಮಾನದಿಂದ ಅವರನ್ನು 104 ಸ್ಥಾನಗಳಲ್ಲಿ ಆಯ್ಕೆ ಮಾಡಿದ್ದು, ವಿರೋಧ ಪಕ್ಷದಲ್ಲಿ ಕೂರಿಸಲು. ಅದನ್ನು ಮಾಡಲಿ, ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈಹಾಕಿದಲ್ಲಿ ನಾವೇನು ಎಂಬುದನ್ನು ತೋರಿಸುತ್ತೇವೆ ಎಂದು ಮಾತನಾಡಿದರು.

ಬಿಜೆಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ, ಇವರ ಮುಂದಿನ ನಡವಳಿಕೆ ನೋಡಿ ನಮ್ಮ ಮುಂದಿನ ಕಾರ್ಯಚಟುವಟಿಕೆ ಮಾಡುತ್ತೇವೆ, ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಹೊಂದಾಣಿಕೆ ಕಷ್ಟವಾಗಿರೋದು ಸತ್ಯ, ಆದರೆ ರಾಷ್ಟ್ರೀಯ ಮಟ್ಟದ ನಿರ್ಧಾರಗಳಿಗೆ ನಮ್ಮ‌ ಜಿಲ್ಲೆಯ ಎರಡೂ ಪಕ್ಷದ ಕಾರ್ಯಕರ್ತರು ನಾಯಕರು ಒಂದಾಗಿ ಕೆಲಸ‌ ಮಾಡುತಿದ್ದಾರೆ. ಮುಂದಿನ ಚುನಾವಣೆಗಳಲ್ಲಿಯೂ ಇದೇ ಮೈತ್ರಿ ಮುಂದುವರಯಲಿದೆ ಎಂದರು.

Next Story

RELATED STORIES