Top

ರಾಮನಗರ ಬಿಜೆಪಿಗೆ ಮತ್ತೊಂದು ಶಾಕ್..!

ರಾಮನಗರ ಬಿಜೆಪಿಗೆ ಮತ್ತೊಂದು ಶಾಕ್..!
X

ರಾಮನಗರ: ರಾಮನಗರ ಉಪ ಚುನಾವಣೆ ಸಮೀಪಿಸುತ್ತಿದ್ದಾಗಲೇ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ ಇನ್ನೊರ್ವ ಬಿಜೆಪಿ ಮುಖಂಡ ಪಕ್ಷ ತೊರೆಯುವ ಸಾಧ್ಯತೆ ಕಂಡುಬಂದಿದೆ.

ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ. ನಾಳೆ ರುದ್ರೇಶ್ ಸುದ್ದಿಗೋಷ್ಠಿ ಕರೆಯಲು ನಿರ್ಧರಿಸಿದ್ದು, ಪಕ್ಷದ ನಾಯಕರ ನಡೆಗೆ ತೀವ್ರ ಬೇಸರ ಉಂಟಾಗಿದ್ದು, ಚಂದ್ರಶೇಖರ್ ಕಣದಿಂದ ನಿವೃತ್ತಿ ಪಡೆದಾಗ ಪಕ್ಷದ ಪ್ರಮುಖರು ಏನು ಚರ್ಚೆ ಮಾಡಿಲ್ಲ. ಸಂತೋಷ್ ,ಅರುಣ್ ಕುಮಾರ್ ಸೇರಿದಂತೆ ಪಕ್ಷದ ಸಂಘಟನೆ ಬಗ್ಗೆ ಸಲಹೆಯನ್ನು ನೀಡಿಲ್ಲ. ಕಾರ್ಯಕರ್ತರನ್ನು ಸಮಾಧಾನ ಮಾಡಲು ಮುಂದಾಗಿಲ್ಲ. ಒಬ್ಬಂಟಿಯಾಗಿ ತನ್ನಿಂದೇನು ಮಾಡಲು ಸಾಧ್ಯವಿಲ್ಲವೆಂದು ಬಿಜೆಪಿ ಪ್ರಮುಖರ ಬಗ್ಗೆ ಬೇಸರವಾಗಿ, ಜಿಲ್ಲಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದಾರೆನ್ನಲಾಗಿದೆ.

Next Story

RELATED STORIES