Top

ಡಿಸಿಪಿ ಅಣ್ಣಾಮಲೈ ಮುಂದೆ ಹಾಜರಾಗಲಿರುವ ನಟ ದುನಿಯಾ ವಿಜಯ್

ಡಿಸಿಪಿ ಅಣ್ಣಾಮಲೈ ಮುಂದೆ ಹಾಜರಾಗಲಿರುವ ನಟ ದುನಿಯಾ ವಿಜಯ್
X

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್​ಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ನೋಟಿಸ್ ಜಾರಿಮಾಡಿದ್ದಾರೆ.

ಶಾಂತಿ, ಕಾನೂನು ಸುವ್ಯವಸ್ಥೆ ಹದಗೆಡಿಸಿದ ಆರೋಪದ ಮೇಲೆ ಸಿಆರ್​ಪಿಸಿ 107 ಹಾಕಲಾಗಿತ್ತು. ಸೆಕ್ಷನ್ ಹಾಕಿ ವಾರ ಕಳೆದರು ಬಂದು ಮುಚ್ಚಳಿಕೆ ಬರೆದು ಕೊಡದ ಹಿನ್ನೆಲೆ ಇದೀಗ ನೋಟಿಸ್ ಜಾರಿಮಾಡಲಾಗಿದೆ.

ಇದೀಗ ವಿಚಾರಣೆ ಹಾಜರಾಗುವಂತೆ ದುನಿಯಾ ವಿಜಯ್ ಗೆ ದಕ್ಷಿಣ ವಿಭಾಗ ಡಿಸಿಪಿ ಆಣ್ಣಾಮಲೈ ನೋಟಿಸ್ ಜಾರಿ ಮಾಡಿದ್ದಾರೆ.

ವಿಜಯ್ ಕುಟುಂಬದವರು ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ದುನಿಯಾ ವಿಜಯ್ ಹಾಗೂ ದುನಿಯಾ ವಿಜಯ್ ಪತ್ನಿ ನಾಗರತ್ನ ಎರಡು ಕಡೆಯವರ ಮೇಲೆ 107ಸೆಕ್ಷನ್ ಹಾಕಲಾಗಿತ್ತು.

ಸೋಮವಾರ ನಟ ದುನಿಯಾ ವಿಜಯ್ ಹಾಗೂ ಇತರರು ದಕ್ಷಿಣ ವಿಭಾಗ ಡಿಸಿಪಿ ಆಣ್ಣಾಮಲೈ ಮುಂದೆ ಹಾಜರಾಗಲಿದ್ದು ಡಿಸಿಪಿ ಅಣ್ಣಾ ಮಲೈ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

Next Story

RELATED STORIES