Top

ಮದುವೆಯಾಗಿ 6 ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಲಾಲೂ ಪುತ್ರ

ಮದುವೆಯಾಗಿ 6 ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಲಾಲೂ ಪುತ್ರ
X

ಪಾಟ್ನಾ: ಮದುವೆಯಾದ ಆರು ತಿಂಗಳಿಗೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬಿಹಾರದ ಮಾಜಿ ಸಚಿವರ ಮಗಳಾದ ಐಶ್ವರ್ಯಾ ರೈಳನ್ನ ತೇಜ್ ಪ್ರತಾಪ್ ಯಾದವ್ 6 ತಿಂಗಳ ಹಿಂದೆ ವಿವಾಹವಾಗಿದ್ದರು. ಇದೀಗ ಕೌಟುಂಬಿಕ ಕಲಹ ಕಾರಣ ತೇಜ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯಾ ವಿಚ್ಛೆದನ ಪಡೆಯಲು ಮುಂದಾಗಿದ್ದಾರೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ತೇಜ್ ಪರ ವಕೀಲ ಯಶ್ವಂತ್ ಕುಮಾರ್ ಶರ್ಮಾ, ತೇಜ್ ಮತ್ತು ಐಶ್ವರ್ಯಾ ಮದುವೆ ಮುರಿದು ಬಿದ್ದಿದ್ದು, ಹಿಂದು ವಿವಾಹ ಕಾಯ್ದೆ ಪ್ರಕಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ವಿಚ್ಛೇದನ ಹಿಂಪಡೆಯುವಂತೆ ಸಂಬಂಧಿಕರು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವರ್ಷ ಮೇ 12ರಂದು ತೇಜ್ ಪ್ರತಾಪ್ ಯಾದವ್ ಐಶ್ವರ್ಯರನ್ನು ವಿವಾಹವಾಗಿದ್ದರು. ಅದ್ಧೂರಿ ವಿವಾಹಕ್ಕೆ, ಬಿಹಾರ್ ಗವರ್ನರ್ ಸತ್ಯಪಾಲ್ ಮಲ್ಲೀಕ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿ ಹತ್ತು ಸಾವಿರ ಜನ ಸಾಕ್ಷಿಯಾಗಿದ್ದರು.

ಮಗನ ಮದುವೆ ಕಾರಣಕ್ಕಾಗಿ, ಜೈಲು ಪಾಲಾಗಿದ್ದ ಲಾಲು ಪ್ರಸಾದ್ ಯಾದವ್ ಮೂರು ದಿನಗಳ ಕಾಲ ಪೆರೋಲ್ ಪಡೆದು ಮನೆಗೆ ಬಂದಿದ್ದರು.

Next Story

RELATED STORIES