Top

ಮಂಡ್ಯ ಮತದಾರರ ಪಟ್ಟಿಯಲ್ಲಿ ರಮ್ಯಾ 420..!

ಮಂಡ್ಯ ಮತದಾರರ ಪಟ್ಟಿಯಲ್ಲಿ ರಮ್ಯಾ 420..!
X

ಮಂಡ್ಯ: ಮಂಡ್ಯದ ಮಾಜಿ ಸಂಸದೆ ರಮ್ಯಾಗೆ ಈ ಬಾರಿಯೂ ಕೂಡ ಮತದಾರರ ಪಟ್ಟಿಯಲ್ಲಿ 420 ಸಂಖ್ಯೆ ಸಿಕ್ಕಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾಗೆ 420 ಸಂಖ್ಯೆ ಸಿಕ್ಕಿದ್ದು, ಈ ಬಾರಿಯೂ ಕೂಡ ರಮ್ಯಾಗೆ 420 ನಂಬರ್ ಸಿಕ್ಕಿದೆ. ಮತದಾರರ ಪಟ್ಟಿಯಲ್ಲಿ ರಮ್ಯಾ ಹೆಸರು ದಿವ್ಯಸ್ಪಂದನ ಎಂದು ಇದೆ.

ಇನ್ನು ನಗರಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ರಮ್ಯಾ ಸಂಖ್ಯೆ 671ಕ್ಕೆ ಬದಲಾಗಿತ್ತು. ಆದ್ರೆ ಇದೀಗ ಮತ್ತೆ 420 ಸಂಖ್ಯೆ ದೊರೆತಿದ್ದು, ಈ ವಿಷಯವಾಗಿ ಸಾರ್ವಜನಿಕರು ರಮ್ಯಾ ಕುರಿತು ವ್ಯಂಗ್ಯವಾಡಿದ್ದಾರೆ.

ನಾಳೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ನಾಳೆಯಾದ್ರೂ ರಮ್ಯಾ ಮತದಾನ ಮಾಡ್ತಾರಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಈ ಹಿಂದೆ ವಿಧಾನಸಭೆ, ನಗರಸಭೆ ಚುನಾವಣೆಯಲ್ಲಿ ರಮ್ಯಾ ಮತದಾನ ಮಾಡದೇ ಇದ್ದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

Next Story

RELATED STORIES