Top

ಐವರು ಶಂಕಿತ ಉಲ್ಫಾ ಉಗ್ರರ ಹತ್ಯೆ: ಉದ್ವಿಗ್ನ ಪರಿಸ್ಥಿತಿ

ಐವರು ಶಂಕಿತ ಉಲ್ಫಾ ಉಗ್ರರ ಹತ್ಯೆ: ಉದ್ವಿಗ್ನ ಪರಿಸ್ಥಿತಿ
X

ಭಾರತೀಯ ಸೇನಾ ಪಡೆದ ಶಂಕಿತ ಉಲ್ಫಾ ಉಗ್ರರೆಂದು ಭಾವಿಸಿ ಐವರನ್ನು ಹತ್ಯೆ ಮಾಡಿದ ಘಟನೆ ಅಸ್ಸಾಂನ ಟಿನ್ಸುಕಿಯಾ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ. ಮುಗ್ಧರನ್ನು ಹತ್ಯೆ ಮಾಡಿದ್ದನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್ ಹಾಗೂ ಬಂಗಾಳಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದೆ.

ಅಸ್ಸಾಂ ಪ್ರತ್ಯೇಕತಾವಾದಿ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಅನುಮಾನ ಗೊಂಡ ಸೇನಾಪಡೆ ಗುರುವಾರ ಸಂಜೆ ಕಾರ್ಯಾಚರಣೆ ನಡೆಸಿತ್ತು. ಕೇರ್ಬರಿ ಬಿಸೊನಿಬಾರಿ ಪ್ರದೇಶದಲ್ಲಿ ಕೈಗೆ ಸಿಕ್ಕ ಐವರನ್ನು ಹಿಡಿದು ಗನ್ ಗುರಿಯಾಗಿ ಎಳೆದೊಯ್ದಿದ್ದರು. ನಂತರ ಅವರನ್ನು ಲೋಹಿತ್ ನದಿಯ ಬಳಿ ಎನ್​ಕೌಂಟರ್ ಮಾಡಲಾಗಿತ್ತು.

ಇಂಡೋ- ಮ್ಯಾನ್ಮರ್ ಗಡಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಅಸ್ಶಾಂ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿನ ಚಲನವಲನಗಳನ್ನು ಗಮನಿಸುತ್ತಿತ್ತು.

ಕಾರ್ಯಾಚರಣೆ ನೆಪದಲ್ಲಿ ಮುಗ್ಧರನ್ನು ಸೇನೆ ಹತ್ಯೆ ಮಾಡಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.

Next Story

RELATED STORIES