Top

ಡಿ.ರೂಪಾ ಮಾಡಿದ ಸಮೀಕ್ಷೆಗೆ ಬಂದ ಉತ್ತರವೇನು ಗೊತ್ತಾ..?

ಡಿ.ರೂಪಾ ಮಾಡಿದ ಸಮೀಕ್ಷೆಗೆ ಬಂದ ಉತ್ತರವೇನು ಗೊತ್ತಾ..?
X

ಪೊಲೀಸರ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯವಿದೆ ಎಂಬುದನ್ನ ತಿಳಿಯುವುದಕ್ಕಾಗಿ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವಿಟರ್‌ನಲ್ಲಿ ಸರ್ವೆ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ ಡಿ.ರೂಪಾ ಪೊಲೀಸರ ಬಗ್ಗೆ ಸರ್ವೆಗೆ ಬಂದಿದ್ದು, ರೂಪಾ ಕೇಳಿದ ಪ್ರಶ್ನೆಗೆ 24 ಗಂಟೆಯಲ್ಲಿ 11,544 ಮಂದಿ ಓಟ್ ಮಾಡಿದ್ದಾರೆ.

ನಿನ್ನೆ ಟ್ವಿಟರ್‌ನಲ್ಲಿ ಸರ್ವೆ ಮಾಡಿದ್ದ ಡಿ.ರೂಪಾ, ಪೊಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಹೆಚ್ಚಿನ ಜನ ಪೊಲೀಸರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಪೊಲೀಸರ ಜೊತೆ ಸಂಪರ್ಕ- ಸಕಾರಾತ್ಮಕ ಅಥವಾ ನಕಾರಾತ್ಮಕ ಎಂದು ಕೇಳಿದಾಗ, ಶೇ 51ರಷ್ಟು ಮಂದಿ ಪೊಲೀಸರ ಜೊತೆ ಸಂಪರ್ಕ ನಕಾರಾತ್ಮಕ ಎಂದು ಪ್ರತಿಕ್ರಿಯಿಸಿದ್ದಾರೆ.

ಸರ್ವೆಯನ್ನು 956 ಮಂದಿ ಲೈಕ್ ಮಾಡಿದ್ದು, 726 ಬಾರಿ ರಿಟ್ವೀಟ್ ಆಗಿದೆ. 743 ಮಂದಿ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.

Next Story

RELATED STORIES