Top

ಪ್ರಿಯಕರನ ಚಾಲೆಂಜ್ ಸ್ವೀಕರಿಸಿ ಸಾವಿಗೀಡಾದ ಪ್ರಿಯತಮೆ

ಪ್ರಿಯಕರನ ಚಾಲೆಂಜ್ ಸ್ವೀಕರಿಸಿ ಸಾವಿಗೀಡಾದ ಪ್ರಿಯತಮೆ
X

ಬೆಂಗಳೂರು: ಪ್ರಿಯಕರ ಮಾಡಿದ ಚಾಲೆಂಜ್ ಸ್ವೀಕರಿಸಲು ಹೋಗಿ ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಿವ್ಯ(19) ಮೃತ ದುರ್ದೈವಿಯಾಗಿದ್ದಾಳೆ.

ದಿವ್ಯಾಳ ಪ್ರಿಯಕರ ಹರೀಶ್(20), ನನ್ನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು ಚಾಲೆಂಜ್ ಮಾಡಿದ್ದ. ಹರೀಶ್ ಮಾತನ್ನ ಗಂಭೀರವಾಗಿ ಪರಿಗಣಿಸಿದ ದಿವ್ಯ ವಿಷ ಕುಡಿದಿದ್ದಾಳೆ.

ಚಿಕಿತ್ಸೆಗಾಗಿ ದಿವ್ಯಾಳನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಹರೀಶ್‌ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Next Story

RELATED STORIES