Top

ದೀಪಿಕಾ ಬೆಂಗಳೂರು ಮನೆಯಲ್ಲಿ ಶುರುವಾಯ್ತು ಮದುವೆ ತಯಾರಿ

ದೀಪಿಕಾ ಬೆಂಗಳೂರು ಮನೆಯಲ್ಲಿ ಶುರುವಾಯ್ತು ಮದುವೆ ತಯಾರಿ
X

ಕನ್ನಡತಿ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ತಯಾರಿ ಸದ್ದಿಲ್ಲದೇ ಆರಂಭಗೊಂಡಿದ್ದು, ಎರಡೂ ಮನೆಗಳಲ್ಲಿ ಸಂಭ್ರಮ-ಸಡಗರ ತುಂಬಿದೆ.

ಸ್ಟಾರ್ ಸೆಲೆಬ್ರೆಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ತಿಂಗಳ 14 ಮತ್ತು 15ರಂದು ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ. ವಿವಾಹ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಸಿದ್ಧತೆಗಳು ಕೂಡ ಜೋರಾಗಿ ನಡೆದಿದೆ.

ದೀಪಾವಳಿ ಹಬ್ಬ ಕೂಡ ಹತ್ತಿರದಲ್ಲೇ ಇರುವುದರಿಂದ ದೀಪಿಕಾ ವಿಶೇಷವಾಗಿ ಸಂಪ್ರದಾಯಸ್ಥ ಉಡುಗೆಯಲ್ಲಿ ಅಲಂಕಾರ ಮಾಡಿಕೊಂಡು ಪೂಜಾ ವಿಧಿ ವಿಧಾನದಲ್ಲಿ ಭಾಗಿಯಾದರು.

32 ವರ್ಷದ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ವಿವಾಹ ಪೂರ್ವ ತಯಾರಿಯಲ್ಲಿ ಭಾಗಿಯಾಗಿದ್ದು, ಆಪ್ತರು ಮಾತ್ರ ಇದ್ದರು. ತಾಯಿ ಉಜಾಲಾ ಪಡುಕೋಣೆ ನೇತೃತ್ವದಲ್ಲಿ ನಂದಿ ಪೂಜೆ ನೆರವೇರಿತು.

Next Story

RELATED STORIES