Top

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಾಸನಾಂಬೆ ಭಕ್ತರ ಪರದಾಟ

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಾಸನಾಂಬೆ ಭಕ್ತರ ಪರದಾಟ
X

ಹಾಸನ: ಇಷ್ಟು ವರ್ಷ ಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಗಿಂತ ಈ ಬಾರಿಯ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಜಿಲ್ಲಾಡಳಿತದ ವೈಫಲ್ಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಅತಿಯಾದ ಭದ್ರತೆ , ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಭಕ್ತರ ಸಂಖ್ಯೆ ಇಳಿಮುಖವಾಗುವುದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಪೊಲೀಸರ ಸರ್ಪಗಾವಲಿನಿಂದ ಬೇಸತ್ತಿರುವ ಭಕ್ತಾದಿಗಳು, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಸ್ಥಳದಲ್ಲಿ ನಾಮಕಾವಾಸ್ತೆಗಷ್ಟೇ ಶೌಚಾಲಯ ನಿರ್ಮಿಸಲಾಗಿದ್ದು, ಶೌಚಾಲಯ ಬಳಸಲು ನೀರಿಲ್ಲದೆ, ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಮಹಿಳಾ ಶೌಚಾಲಯವನ್ನ ಪುರುಷ ಪೊಲೀಸ್ ಉಪಯೋಗಿಸುತ್ತಿರುವ ದೃಶ್ಯ ಕೂಡ ಕಂಡುಬಂತು. ಸರಿಯಾದ ಶೌಚ ವ್ಯವಸ್ಥೆ ಇಲ್ಲದೇ, ಗಂಟೇಗಟ್ಟಲೆ ಕ್ಯೂನಲ್ಲಿ ನಿಂತು ಪರದಾಡುತ್ತಿರುವ ಭಕ್ತರು ಜಿಲ್ಲಾಡಳಿತದ ಅವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.

ಒಟ್ಟಾರೆಯಾಗಿ ಹಾಸನಾಂಬೆ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡಿರುವ ಜಿಲ್ಲಾಡಳಿತ, ಈ ಪರಿಯ ನಿರ್ಲಕ್ಷ್ಯ ವಹಿಸಿರುವುದು ಮಾತ್ರ ವಿಪರ್ಯಾಸದ ಸಂಗತಿ. ಇನ್ನು ಈ ಬಗ್ಗೆ tv5ಕನ್ನಡ ರಿಯಾಲಿಟಿ ಚೆಕ್ ಮಾಡಿದೆ.

Next Story

RELATED STORIES