Top

ಅನೈತಿಕ ಸಂಬಂಧಕ್ಕೆ ಶಿಕ್ಷಕಿಯ ಕೊಲೆ ಮಾಡಿದ ಮಾಡೆಲ್.!

ಅನೈತಿಕ ಸಂಬಂಧಕ್ಕೆ ಶಿಕ್ಷಕಿಯ ಕೊಲೆ ಮಾಡಿದ ಮಾಡೆಲ್.!
X

ನವದೆಹಲಿ: ಅನೈತಿಕ ಸಂಬಂಧ ಹಿನ್ನೆಲೆ ಶಾಲೆಯೊಂದರ ಶಿಕ್ಷಕಿಯನ್ನು ಆಕೆಯ ಪತಿ ಮತ್ತು ಮಾಡೆಲ್ ಸೇರಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸುನೀತಾ(37) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಈಕೆಯ ಪತಿ ಮಂಜೀತ್‌ಗೆ ಏಂಜೆಲ್ ಗುಪ್ತಾ (ಶಶಿ ಪ್ರಭಾ)ಎಂಬಾಕೆಯೊಂದಿಗೆ ಅನೈತಿಕ ಸಂಬಂಧವಿತ್ತು. ಈ ವಿಷಯ ಗೊತ್ತದಾಗ ಸುನೀತಾ ಅನೈತಿಕ ಸಂಬಂಧವನ್ನ ವಿರೋಧಿಸಿದ್ದಾಳೆ. ಈ ಕಾರಣಕ್ಕಾಗಿ ಮಂಜೀತ್, ಏಂಜೇಲ್ ಮತ್ತು ಆಕೆಯ ತಂದೆ ರಾಜೀವ್ ಸೇರಿ ಸುನೀತಾಳನ್ನ ಸುಪಾರಿ ಕೊಟ್ಟು ಕೊಲ್ಲಿಸಿದ್ದಾರೆ.

ಸುನೀತಾ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತನೋರ್ವ ಅಡ್ಡಬಂದು ಬಂದೂಕಿನಿಂದ ಮೂರು ಬಾರಿ ಗುಂಡು ಹಾರಿಸಿ ಆಕೆಯ ಕೊಲೆ ಮಾಡಿದ್ದಾನೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸುನೀತಾ ಸಾವನ್ನಪ್ಪಿದ್ದಾಳೆ.

ಮೂರು ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Next Story

RELATED STORIES